ಚುನಾವಣೆ ಪ್ರಕ್ರಿಯೆನ್ನು ಪರ್ಫೆಕ್ಟ್ ಎಂದು ಹೊಗಳಿದ ಪ್ರಭನ್ ಮುಖರ್ಜಿ| ಚುನಾವಣಾ ಆಯೋಗಕ್ಕೆ ಶಹಬ್ಬಾಸಗಿರಿ ನೀಡಿದ ಮಾಜಿ ರಾಷ್ಟ್ರಪತಿ| ವಿಪಕ್ಷಗಳ ಟೀಕೆಗೆ ಮಾಜಿ ರಾಷ್ಟ್ರಪತಿ ತಿರುಗೇಟು| 'ಕಳಪೆ ಕೆಲಸಗಾರ ಮಾತ್ರ ತನ್ನ ಸಾಧನಗಳನ್ನು ದೂಷಿಸುತ್ತಾನೆ..'| ಚುನಾವಣೆ ಆಯೋಗದ ಕಾರ್ಯ ಶ್ಲಾಘನೀಯ ಎಂದ ಪ್ರಣಬ್ ಮುಖರ್ಜಿ|
ನವದೆಹಲಿ(ಮೇ.21): ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಪಕ್ಷಪಾತಿ ಎಂತೆಲ್ಲಾ ಬೊಬ್ಬೆ ಇಡುತ್ತಿದ್ದ ಪ್ರತಿಪಕ್ಷಗಳಿಗೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಕ್ತ ತಿರುಗೇಟು ನೀಡಿದ್ದಾರೆ.
ಚುನಾವಣೆ ಪ್ರಕ್ರಿಯೆಯನ್ನು ಪರ್ಫೆಕ್ಟ್ ಎಂದು ಕರೆದಿರುವ ಮಾಜಿ ರಾಷ್ಟ್ರಪತಿ, ಲೋಕಸಭೆ ಚುನಾವಣೆಯನ್ನು ಚುನಾವಣಾ ಆಯೋಗ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು ಎಂದು ಹೊಗಳಿದ್ದಾರೆ.
'ಕಳಪೆ ಕೆಲಸಗಾರ ಮಾತ್ರ ತನ್ನ ಸಾಧನಗಳನ್ನು ದೂಷಿಸುತ್ತಾನೆ..' ಎಂದು ಮಾರ್ಮಿಕವಾಗಿ ನುಡಿದಿರುವ ಪ್ರಣಬ್, ಚುನಾವಣಾ ಆಯೋಗದ ಕೆಲಸ ಕಾರ್ಯವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Scroll to load tweet…
ಭಾರತದಂತ ವಿಶಾಲ ದೇಶದಲ್ಲಿ ಚುನಾವಣೆ ನಡೆಸುವುದು ಎಂದರೆ ಸರಳ ಮಾತಲ್ಲ ಎಂದಿರುವ ಮಾಜಿ ರಾಷ್ಟ್ರಪತಿ, ಇಷ್ಟು ಅಚ್ಚುಕಟ್ಟಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿರುವ ಚುನಾವಣಾ ಆಯೋಗ ನಿಜಕ್ಕೂ ಅದ್ಭುತ ಎಂದು ಹೊಗಳಿದ್ದಾರೆ.
ಗೆದ್ದವರಾರು? ಬಿದ್ದವರಾರು? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
