ಸೂಪರ್‌ಸ್ಟಾರ್‌ ರಜನಿ ಎಡಗೈ ಬದಲಿಗೆ ಬಲಗೈ ಬೆರಳಿಗೆ ಶಾಯಿ| ವರದಿ ಕೇಳಿದ ಚುನಾವಣಾ ಆಯೋಗದ ಅಧಿಕಾರಿಗಳು

ಚೆನ್ನೈ[ಏ.20]: ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂಬ ಗುರುತಿಗಾಗಿ ಚುನಾವಣೆ ಕೆಲಸಕ್ಕೆ ನಿಯೋಜನೆಯಾದ ಅಧಿಕಾರಿಗಳು ಮತದಾರರ ಎಡಗೈ ಬೆರಳಿಗೆ ಅಳಿಸಲಾಗದ ನೀಲಿ ಇಂಕ್‌ ಹಚ್ಚುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಸೂಪರ್‌ಸ್ಟಾರ್‌ ನಟ ರಜನೀಕಾಂತ್‌ ಅವರ ಎಡಗೈ ಬೆರಳಿಗೆ ಇಂಕ್‌ ಹಚ್ಚುವ ಬದಲಿಗೆ ಅಧಿಕಾರಿಯೊಬ್ಬರು ಬಲಗೈ ಬೆರಳಿಗೆ ಹಚ್ಚಿದ್ದಾರೆ. ಹೀಗಾಗಿ, ರಜನಿ ಅವರ ಬಲಗೈ ಬೆರಳಿಗೆ ಇಂಕ್‌ ಹಚ್ಚಿದ ಅಧಿಕಾರಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತಾ ಸಾಹೂ ಅವರು, ‘ಮತದಾರರ ಎಡಗೈ ಬೆರಳಿಗೆ ಶಾಯಿ ಹಚ್ಚುವುದು ಮೊದಲ ಆದ್ಯತೆಯಾಗಬೇಕು. ನಿರ್ದಿಷ್ಟ ಕಾರಣವಿದ್ದರೆ, ಬಲಗೈನ ಬೆರಳಿಗೆ ಶಾಯಿ ಹಚ್ಚಬಹುದು,’ ಎಂದರು. ಅಲ್ಲದೆ, ಇದು ಅಧಿಕಾರಿಯಿಂದ ಆಗಿರುವ ತಪ್ಪು ಎಂಬಂತೆ ತೋರ್ಪಡುತ್ತಿದೆ ಎಂದು ಅವರು ಹೇಳಿದರು.