ಮೋದಿ ವೆಬ್ ಸರಣಿ ನಿಷೇಧಿಸಿದ ಚುನಾವಣಾ ಆಯೋಗ| ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ನಿರ್ದೇಶನದ ವೆಬ್ ಸರಣಿ| 'ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್' ವೆಬ್ ಸರಣಿಗೆ ಚುನಾವಣಾ ಆಯೋಗದ ಬ್ರೇಕ್|
ನವದೆಹಲಿ(ಏ.20): ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರ ಮತ್ತು ನಮೋ ಟಿವಿ ನಿಷೇಧಿಸಿದ್ದ ಚುನಾವಣಾ ಆಯೋಗ, ಇದೀಗ ಮೋದಿ ಜೀವನಾಧಾರಿತ ವೆಬ್ ಸರಣಿಯನ್ನೂ ನಿಷೇಧಿಸಿದೆ.
ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ 'ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್' ವೆಬ್ ಸರಣಿಯನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಮೋದಿ ವೆಬ್ ಸರಣಿಯ ಆನ್ ಲೈನ್ ಸ್ಟ್ರೀಮಿಂಗ್ ನಿಲ್ಲಿಸುವಂತೆ ಇರೋಸ್ ನೌಗೆ ಸೂಚಿಸಿದೆ.
Scroll to load tweet…
ಪ್ರಧಾನಿ ಮೋದಿ ಅವರ ಜೀವನ ಆಧಾರಿತ 'ಮೋದಿ: ಜರ್ನಿ ಆಫ್ ಎ ಕಾಮನ್‌ಮ್ಯಾನ್' ಐದು ಕಂತುಗಳನ್ನು ಒಳಗೊಂಡಿದೆ. ಆದರೆ ಚುನಾವಣೆ ಸಮಯದಲ್ಲಿ ಮತದಾರನ ಮೇಲೆ ಪ್ರಭಾವ ಬೀರಬಲ್ಲ ಅಂಶ ಬಿತ್ತರಿಸುವಂತಿಲ್ಲ ಎಂಬ ಆಯೋಗದ ನಿಯಮದ ಅನ್ವಯ ವೆಬ್ ಸರಣಿಗೆ ಬ್ರೇಕ್ ಹಾಕಲಾಗಿದೆ.
