Asianet Suvarna News Asianet Suvarna News

ಪಕ್ಷಗಳು Facebookಗೆ ಸುರಿದ ಹಣ 10 ಕೋಟಿಗೂ ಹೆಚ್ಚು!: ಯಾವ ಪಕ್ಷ ಮುಂಚೂಣಿಯಲ್ಲಿ?

ಲೋಕಸಭಾ ಚುನಾವಣೆಗೆ ಪ್ರಚಾರದ ಭರಾಟೆ| ರಾಜಕೀಯ ಪಕ್ಷಗಳು ಫೇಸ್‌ಬುಕ್‌ಗೆ ಸುರಿದ ಹಣ 10 ಕೋಟಿಗೂ ಹೆಚ್ಚು!|

Political Ad Spend on Facebook Crosses Rs 10 Crore
Author
Bangalore, First Published Apr 8, 2019, 10:14 AM IST

ನವದೆಹಲಿ[ಏ.08]: ಸಾಮಾಜಿಕ ಜಾಲತಾಣಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್‌ಬುಕ್‌ ಕೂಡ ಈಗ ಚುನಾವಣೆಯ ಪ್ರಚಾರಕ್ಕೆ ಬಹುದೊಡ್ಡ ವೇದಿಕೆಯಾಗಿ ಪರಿಣಮಿಸಿದೆ.

ಫೇಸ್‌ಬುಕ್‌ ಜಾಹೀರಾತು ವಿಭಾಗವೇ ನೀಡಿರುವ ಮಾಹಿತಿ ಪ್ರಕಾರ ಫೆಬ್ರುವರಿ ಮತ್ತು ಮಾಚ್‌ರ್‍ನಲ್ಲಿ ರಾಜಕೀಯ ಪಕ್ಷಗಳು, ಲೋಕಸಭಾ ಅಖಾಡದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ವ್ಯಯಿಸಿರುವ ಹಣ ಬರೋಬ್ಬರಿ 10 ಕೋಟಿ ರುಪಾಯಿಗೂ ಹೆಚ್ಚು. ಇದರಲ್ಲಿ ಬಿಜೆಪಿ ಅಭ್ಯರ್ಥಿಗಳದ್ದೇ ಬಹುದೊಡ್ಡ ಪಾಲು. 2 ತಿಂಗಳಾವಧಿಯಲ್ಲಿ 51,810 ರಾಜಕೀಯ ಜಾಹೀರಾತುಗಳಿಗಾಗಿ ಒಟ್ಟು 10.32 ಕೋಟಿ ರು. ವ್ಯಯಿಸಲಾಗಿದೆ.

ಬಿಜೆಪಿ ‘ಭಾರತ್‌ ಕೇ ಮನ್‌ ಕೀ ಬಾತ್‌’ ಪೇಜ್‌ಗಾಗಿ ಸುಮಾರು 2.23 ಕೋಟಿ ರು. ವ್ಯಯಿಸಿದೆ. ಅಲ್ಲದೆ, ಮೈ ಫಸ್ಟ್‌ ವೋಟ್‌ ಫಾರ್‌ ಮೋದಿ ಹಾಗೂ ನೇಷನ್‌ ವಿತ್‌ ನಮೋ ಪೇಜ್‌ಗಳಿಗೂ ಭಾರೀ ಪ್ರಮಾಣದ ಹಣ ವ್ಯಯಿಸಿದೆ. ಆದರೆ, ಕಾಂಗ್ರೆಸ್‌ ಕಳೆದೆರಡು ತಿಂಗಳಲ್ಲಿ 5.91 ಲಕ್ಷ ರು.ಗಳನ್ನು ವ್ಯಯಿಸಿದೆ. ಫೇಸ್ಬುಕ್‌ ಭಾರತದಲ್ಲಿ ಎರಡು ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ರಾಜಕೀಯ ಪಕ್ಷಗಳು ಅವರ ಮತಗಳತ್ತ ಈ ಮೂಲಕ ದೃಷ್ಟಿಹರಿಸಿದೆ.

Follow Us:
Download App:
  • android
  • ios