ಮೈಸೂರಿನಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಪೇದೆಯೋರ್ವರನ್ನು ಅಮಾನತುಗೊಳಿಸಿ ಸಚಿವ ಸಾ.ರಾ ಮಹೇಶ್ ದರ್ಪ ಮೆರೆದಿದ್ದಾರೆ.
ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರ ಕಾರು ತಡೆದ ಹೆಡ್ ಕಾನ್‌ಸ್ಟೇಬಲ್ ಅನ್ನು ಅಮಾನತುಗೊಳಿಸಿ ದರ್ಪ ಮೆರೆಯಲಾಗಿದೆ.
ಕಾನೂನು ಪಾಲಿಸಿದ್ದಕ್ಕಾಗಿ ಹೆಡ್ ಕಾನ್ ಸ್ಟೇಬಲ್ ಗೆ ಅಮಾನತು ಶಿಕ್ಷೆ ನೀಡಲಾಗಿದೆ. ಚುನಾವಣಾ ನಾಮಪತ್ರ ಸಲ್ಲಿಕೆ ನಿಮಿತ್ರ ಡಿಸಿ ಕಚೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈ ವೇಳೆ ಖಾಸಗಿ ಕಾರಿನಲ್ಲಿ ಸಚಿವ ಸಾ.ರಾ ಮಹೇಶ್ ಆಗಮಿಸಿದ್ದರು.
ಸಚಿವರ ಖಾಸಗಿ ಕಾರು ಆಗಮಿಸಿದ ವೇಳೆ ಕಾರಿನಲ್ಲಿ ಯಾರಿದ್ದಾರೆ ಎಂದು ಮುಖ್ಯಪೇದೆ ವೆಂಕಟೇಶ್ ಪರಿಶೀಲಿಸಿದ್ದು, ಇದಕ್ಕೆ ಸಚಿವರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಪೊಲೀಸ್ ಕಮೀಷನರ್ ಕೆ.ಟಿ. ಬಾಲಕೃಷ್ಣಗೆ ಕರೆ ಮಾಡಿ ಅಮಾನತು ಮಾಡುವಂತೆ ತಾಕೀತು ಮಾಡಿದ್ದಾರೆ.
ಸಚಿವರು ಸೂಚನೆ ನೀಡುತ್ತಿದ್ದಂತೆ ಪೊಲೀಸ್ ಕಮಿಷನರ್ ಮುಖ್ಯ ಪೇದೆ ವೆಂಕಟೇಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಇನ್ನು ಸಸ್ಪೆಂಡ್ ಮಾಡುವ ಮುನ್ನ ಜಿಲ್ಲಾ ಚುನಾವಣಾಧಿಕಾರಿ ಅನುಮತಿಯನ್ನೂ ಕೂಡ ಪಡೆದುಕೊಂಡಿಲ್ಲ.
ವೆಂಕಟೇಶ್ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸಿದ್ದಗಂಗಾ ಶ್ರೀ ಲಿಂಗೈಕ್ಯರಾದ ಸಂದರ್ಭದಲ್ಲೂ ಮಠದ ಬಳಿ ಪ್ರವೇಶಿಸುವಾಗ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಂದಿಸಿ ಕಣ್ಣೀರು ಹಾಕಿಸಿದ್ದ ಸಚಿವ ಸಾ.ರಾ. ಮಹೇಶ್
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 27, 2019, 12:46 PM IST