ನವದೆಹಲಿ[ಮೇ. 17] ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ತಮಗೆ ದೇಶದ ಸಂಪೂರ್ಣ ಸಹಕಾರ ದೊರೆತಿದ್ದು, ದೇಶಸೇವೆ ಮಾಡಲು ಅವಕಾಶ ದೊರೆತಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ. ಇದೇ ವೇಳೆ ದೇಶ ಮುನ್ನಡೆಸುವಲ್ಲಿ ಮಾಧ್ಯಮಗಳೂ ಕೂಡ ತಮಗೆ ಸಹಕಾರ ನೀಡಿದ್ದು, ಇದಕ್ಕಾಗಿ ನಾನು ಮಾಧ್ಯಮ ಲೋಕಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. 

ಗಾಂಭೀರ್ಯತೆ, ಹಾಸ್ಯ, ಭವಿಷ್ಯ: ಮೋದಿ ಮೊದಲ ಸುದ್ದಿಗೋಷ್ಠಿ ವಿಷ್ಯ!

ಆದರೆ ಸೋಶಿಯಲ್ ಮೀಡಿಯಾ ಮಾತ್ರ ನರೇಂದ್ರ ಮೋದಿ ಅವರದ್ದು ಸುದ್ದಿಗೋಷ್ಠಿ ಆಗಿರಲಿಲ್ಲ. ಮನ್ ಕೀ ಬಾತ್ ತಹರ ಇತ್ತು... ಮೋದಿ ಮಾಧ್ಯಮಗಳ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದು ಮುಂತಾಗಿ ಟೀಕೆ ಮಾಡಿದೆ. ಇದು ಪ್ರೆಸ್ ಕಾನ್ಫರೆನ್ಸ್ ಅಲ್ಲ ಬದಲಾಗಿ ಪ್ರೆಸ್ ಅಪಿರಿಯನಸ್ ಎಂದು ಟೀಕಿಸಲಾಗಿದೆ.