16ನೇ ಲೋಕಸಭೆ ವಿಸರ್ಜನೆ|ಸಚಿವ ಸಂಪುಟ ಸಭೆಯಲ್ಲಿ 16ನೇ ಲೋಕಸಬೆ ವಿಸರ್ಜನೆಗೆ ಅಸ್ತು| ಪ್ರಧಾನಿ ಮೋದಿ ನೇತೃತ್ವದ ಮಂತ್ರಿಮಂಡಲ ರಾಜೀನಾಮೆ|ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೆ ರಾಜೀನಾಮೆ  ಪತ್ರ ಸಲ್ಲಿಸಿದ ಮೋದಿ. 

ನವದೆಹಲಿ(ಮೇ.24): 17ನೇ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ.

ಹಿನ್ನೆಲೆಯಲ್ಲಿ ಇಂದು [ಶುಕ್ರವಾರ] ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ ಅವರನ್ನು ಭೇಟಿ ಮಾಡಿ ತಮ್ಮ ಮಂತ್ರಿಮಂಡಲದಿಂದ ರಾಜೀನಾಮೆ ಸಲ್ಲಿಸಿದರು. 

ಅದಕ್ಕೂ ಮುನ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು, 16ನೇ ಲೋಕಸಭೆಯ ವಿಸರ್ಜನೆ ನಿರ್ಣಯ ಕೈಗೊಂಡಿತು. ಬಳಿಕ ರಾಷ್ಟ್ರಪತಿ ರಾಮನಾಥ್​ ಕೋವಿಂದ ಅವರನ್ನು ಭೇಟಿ ಮಾಡಿ ತಮ್ಮ ಮಂತ್ರಿಮಂಡಲದಿಂದ ರಾಜೀನಾಮೆ ಸಲ್ಲಿಸಿದರು.

Scroll to load tweet…

ಪ್ರಧಾನಿ ಮೋದಿ ನೇತೃತ್ವದ ಮಂತ್ರಿಮಂಡಲದ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಅಧಿಕಾರದಲ್ಲಿ ಮುಂದುವರಿಯುವಂತೆ ಸೂಚಿಸಿದರು. 

17ನೇ ಲೋಕಸಭಾ ಚುನಾವಣೆಯಲ್ಲಿ 542 ಕ್ಷೇತ್ರಗಳ ಪೈಕಿ ಬಿಜೆಪಿ 303 ಸ್ಥಾನಗಳನ್ನು ಗಳಿಸಿದ್ದು, ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದಿದೆ. ​

ಇದೇ 29 ಇಲ್ಲ 30ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.