ಮುಜಫರ್ ನಗರ್(ಏ.30): ಭಾರತಕ್ಕೆ ಬೆದರಿಕೆವೊಡ್ಡುವ ಯಾವುದೇ ರೀತಿಯ ಬಾಹ್ಯ ಅಥವಾ ಆಂತರಿಕ ಶಕ್ತಿಗಳನ್ನು ಹೊಸಕಿ ಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಮುಜಫರ್ ನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಭದ್ರತೆಗೆ ಆತಂಕವೊಡ್ಡುವವರನ್ನು ಅವರು ಇದ್ದಲ್ಲಿಗೇ ಹೋಗಿ ಹೊಸಕಿ ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ಕೆಲವು ಆಂತರಿಕ ಹಾಗೂ ಬಾಹ್ಯ ದುಷ್ಟ ಶಕ್ತಿಗಳು ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಮೋದಿ, ಈ ದುಷ್ಟ ಶಕ್ತಿಗಳನ್ನು ಅವರು ಇರುವಲ್ಲಿಗೇ ಹೊಗಿ ಹೊಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೋದಿಯನ್ನು ಸರ್ವನಾಶ ಮಾಡುವುದೇ ಈ ದುಷ್ಟ ಶಕ್ತಿಗಳ ಏಕಮಾತ್ರ ಅಜೆಂಡಾವಾಗಿದ್ದು, ಇದಕ್ಕೆ ಮೋದಿ ಕೂಡ ಸಿದ್ದವಾಗಿಯೇ ನಿಂತಿದ್ದಾನೆ ಎಂದು ಪ್ರಧಾನಿ ಗುಡುಗಿದರು.

ಲೋಕಸಬೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ