ನವದೆಹಲಿ(ಮೇ.14): ವಿಪಕ್ಷಗಳು ತಮ್ಮ ಮೇಲೆ ಮಾಡುತ್ತಿರುವ ಟೀಕೆಗಳು ಉಡುಗೊರೆಗೆ ಸಮಾನ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ವಿಪಕ್ಷಗಳು ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಾ ಕೀಳು ಮಟ್ಟದ ರಾಜಕೀಯ ಮಾಡುತ್ತಿವೆ. ಆದರೆ ತಾವು ಮಾತ್ರ ಈ ಟೀಕೆಗಳಿಗೆ ಉತ್ತರಿಸಲು ಹೋಗುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳ ಕೀಳು ಮಟದ್ಟ ಟೀಕೆಗಳಿಗೆ ಮತದಾರನೇ ಬಿಜೆಪಿಗೆ ಮತ ಹಾಕುವ ಮೂಲಕ ಉತ್ತರ ನೀಡಲಿದ್ದಾನೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನನ್ನು ಬೈಯದಿದ್ದರೆ ಪ್ರತಿಪಕ್ಷಗಳಿಗೆ ನಿದ್ದೆ ಬರುವುದಿಲ್ಲ ಎಂದಿರುವ ಮೋದಿ ಎಲ್ಲದಕ್ಕೂ ಮೇ.23ರಂದು ಉತ್ತರ ದೊರೆಯಲಿದೆ ಎಂದು ತಿರುಗೇಟು ನೀಡಿದ್ದಾರೆ.
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ