ನವದೆಹಲಿ(ಮೇ.04): ದೇಶದಲ್ಲಿ ಐಪಿಎಲ್ ಪಂದ್ಯಾವಳಿ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಒಟ್ಟಿಗೆ ನಡೆಸುವ ತಾಕತ್ತು ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಏಕಕಾಲಕ್ಕೆ ಐಪಿಎಲ್ ಮತ್ತು ಚುನಾವಣೆ ನಡೆದರೇ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ, 2009, 2014ರಲ್ಲಿ ಅಂದಿನ ಯುಪಿಎ ಸರ್ಕಾರ ಐಪಿಎಲ್ ಪಂದ್ಯಾವಳಿಯನ್ನು ದೇಶದಿಂದ ಹೊರಗಡೆ ಆಯೋಜಿತ್ತು.

ತಮ್ಮ ಚುನಾವಣಾ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪ್ರಧಾನಿ, ಐಪಿಎಲ್ ಮತ್ತು ಚುನಾವಣೆ ಎರಡರ ಹೊಣೆಯನ್ನೂ ಹೊರಬಲ್ಲ ತಾಕತ್ತು ತಮಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಐಪಿಎಲ್ ಮತ್ತು ಲೋಕಸಭೆ ಚುನಾವಣೆ ಎರಡನ್ನೂ ಒಟ್ಟಿಗೆ ನಡೆಸುವ ಎದೆಗಾಆರಿಕೆ ತೋರಲಿಲ್ಲ, ಆದರೆ ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿದ್ದರೂ ಐಪಿಎಲ್ ಪಂದ್ಯಾವಳಿ ಸರಾಗವಾಗಿ ಮುನ್ನಡೆದಿದೆ ಎಂದು ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ