'ಮಮತಾ ದೀದಿ ನನಗೆ ಹೊಡೆದರೆ ಆಶೀರ್ವಾದ ಎಂದು ಸ್ವೀಕರಿಸುತ್ತೇನೆ'| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ತಿರುಗೇಟು| ಪ್ರಜಾಪ್ರಭುತ್ವ ಮೋದಿ ಅವರಿಗೆ ಕಪಾಳಮೋಕ್ಷ ಮಾಡಲಿದೆ ಎಂದಿದ್ದ ಮಮತಾ| 'ನನ್ನ ದೀದಿ(ಅಕ್ಕ) ಹೊಡೆದರೆ ಅದನ್ನು ಆಶೀರ್ವಾದ ಎಂದು ಸ್ವೀಕರಿಸುವೆ'| 'ಅದಕ್ಕೂ ಮೊದಲು ನಿಮ್ಮ ಸರ್ಕಾರದ ಭ್ರಷ್ಟರಿಗೆ, ಸುಲಿಗೆಕೋರರಿಗೆ ಕಪಾಳಮೋಕ್ಷ ಮಾಡಿ'|

ಪುರುಲಿಯಾ(ಮೇ.09): ನಿಮಗೆ ಶೀಘ್ರದಲ್ಲೇ ಪ್ರಜಾಪ್ರಭುತ್ವ ಕಪಾಳಮೋಕ್ಷ ಮಾಡಲಿದೆ ಎಂಬ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನನಗೆ ನಿಮ್ಮ ಮೇಲೆ ಅಪಾರ ಗೌರವವಿದೆ, ನೀವು ನನಗೆ ಹೊಡೆಯುವ ಹೊಡೆತವೂ ನನಗೆ ಆಶೀರ್ವಾದ ಇದ್ದಂತೆ..'ಎಂದು ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದಾರೆ.

ಪ.ಬಂಗಾಳಧ ಪುರುಲಿಯಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ನಾನು ಮಮತಾ ಅವರನ್ನು ದೀದಿ(ಅಕ್ಕ) ಎಂದು ಕರೆಯುತ್ತೇನೆ, ಹೀಗಾಗಿ ಅಕ್ಕ ನನ್ನ ಕೆನ್ನೆಗೆ ಹೊಡೆದರೆ ಅದನ್ನು ಆಶೀರ್ವಾದ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.

'ಆದರೆ ಮಮತಾ ನನಗೆ ಹೊಡೆಯುವುದಕ್ಕೂ ಮೊದಲು ನಿಮ್ಮ ಸರ್ಕಾರದಲ್ಲಿರುವ ಭ್ರಷ್ಟರಿಗೆ, ಸುಲಿಗೆಕೋರರಿಗೆ ಕಪಾಳಮೋಕ್ಷ ಮಾಡಿ ಸರಿ ದಾರಿಗೆ ತನ್ನಿ..'ಎಂದು ಮೋದು ಮಮತಾ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ