ಶಾರೂಖ್ ಖಾನ್ ಅವರನ್ನು ಹೊಗಳಿದ ಪ್ರಧಾನಿ ಮೋದಿ| ಶಾರೂಖ್ ಹೊಸ ಕಾರ್ಯಕ್ಕೆ ಬೆನ್ನು ತಟ್ಟಿದ ಮೋದಿ| ‘ಕರೋ ಮತದಾನ್’ ವಿಡಿಯೋ ಮೂಲಕ ಮತ ಜಾಗೃತಿಗೆ ಮುಂದಾದ ಶಾರೂಖ್| ಶಾರೂಖ್ ವಿಡಿಯೋ ಮೆಚ್ಚಿಕೊಂಡ ಪ್ರಧಾನಿ ಮೋದಿ| ಯುವ ಮತದಾರರ ಮೇಲೆ ಪ್ರಭಾವ ಬೀರುವ ಭರವಸೆ ವ್ಯಕ್ತಪಡಿಸಿದ ಮೋದಿ|
ಮುಂಬೈ(ಏ.22): ಲೋಕಸಭೆ ಚುನಾವಣೆಲ್ಲಿ ಮತದಾನ ಮಾಡುವಂತೆ ಮತ ಜಾಗೃತಿ ಮಾಡಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮತದಾನದ ಮಹತ್ವದ ಕುರಿತು ಶಾರೂಖ್ ಖಾನ್ ಹೊಸ ಮ್ಯುಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ‘ಕರೋ ಮತದಾನ್’ ಎಂಬ ಹೆಸರಿನ ಈ ವಿಡಿಯೋದಲ್ಲಿ ಶಾರೂಖ್ ಮತದಾನ ಮಾಡುವ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಶಾರೂಖ್ ಖಾನ್ ಅವರ ಈ ವಿಡಿಯೋ ಶ್ಲಾಘಿಸಿರುವ ಪ್ರಧಾನಿ ಮೋದಿ, ಮತದಾರರು ಅದರಲ್ಲೂ ಯುವ ಮತದಾರರ ಮೇಲೆ ಶಾರೂಖ್ ಅವರ ಹೊಸ ವಿಡಿಯೋ ಪ್ರಭಾವ ಬೀರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Scroll to load tweet…
ಈ ಕುರಿತು ಟ್ವೀಟ್ ಮಾಡಿರುವ ಶಾರೂಖ್ ಖಾನ್, ತಮ್ಮ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
