ವಾರಾಣಸಿ[ಮೇ.09]: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಲೋಕಸಭೆಯನ್ನು ಪ್ರತಿನಿಧಿಸುವ ವಾರಾಣಸಿಯಲ್ಲಿ 100ಕ್ಕೂ ಹೆಚ್ಚು ದೇಗುಲಗಳನ್ನು ಕೆಡವುವ ಮೂಲಕ ಆಧುನಿಕ ಔರಂಗಜೇಬ್‌ ಆಗಿ ಹೊರಹೊಮ್ಮಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಮ್‌ ದೂಷಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರುಪಮ್‌, ಮೋದಿ ಇಲ್ಲಿಂದ ಆಯ್ಕೆಯಾದ ಮೇಲೆ ಇಲ್ಲಿ ನೂರಾರು ದೇಗುಲಗಳನ್ನು ಒಡೆದುಹಾಕಲಾಗಿದೆ. ಇನ್ನು ವಿಶ್ವನಾಥನ ದರ್ಶನಕ್ಕೆ 550 ರು. ಶುಲ್ಕವನ್ನು ಹೊಸದಾಗಿ ವಿಧಿಸುವ ಪದ್ಧತಿ ಜಾರಿಗೆ ಬಂದಿದೆ. ಇದೆನ್ನೆಲ್ಲಾ ನೋಡಿದರೆ ಮೋದಿಯನ್ನು ಆಧುನಿಕ ಔರಂಗ್‌ಜೇಬ್‌ ಅನ್ನದೇ ವಿಧಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಔರಂಗ್‌ಜೇಬ್‌ನ ದಾಳಿಯಿಂದ ಯಾವ ದೇಗುಲಗಳನ್ನು ಬನಾರಸ್‌ನ ಜನ ರಕ್ಷಿಸಿಕೊಂಡಿದ್ದರೋ ಆ ದೇಗುಲಗಳನ್ನೂ ಮೋದಿ ಧ್ವಂಸಗೊಳಿಸಿದ್ದಾರೆ ಎಂದು ನಿರುಪಮ್‌ ದೂಷಿಸಿದ್ದಾರೆ.