ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು| ಎಲ್.ಕೆ ಅಡ್ವಾಣಿ ಭೇಟಿಯಾದ ಮೋದಿ-ಶಾ ಭೇಟಿ| ಮುರುಳಿ ಮನೋಹರ್ ಜೋಷಿ ಅವರನ್ನೂ ಭೇಟಿಯಾದ ಜೋಡಿ| ಪಕ್ಷದ ಗೆಲುವನ್ನು ಅಡ್ವಾಣಿ ಆಶೀರ್ವಾದ ಎಂದ ಮೋದಿ|
ನವದೆಹಲಿ(ಮೇ.24): ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಷಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
Scroll to load tweet…
ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯ ಈ ಅಭೂತಪೂರ್ವ ಗೆಲುವಿನ ಹಿಂದೆ ಅಡ್ವಾಣಿಯವರ ಕಠಿಣ ಪರಿಶ್ರಮವಿದೆ ಹೇಳಿದ್ದಾರೆ.
ಇದೇ ವೇಳೆ ಮುರುಳಿ ಮನೋಹರ್ ಜೋಷಿ ಅವರನ್ನೂ ಭೇಟಿಯಾದ ಮೋದಿ, ಬಿಜೆಪಿ ಹರಿಯ ನಾಯಕನ ಆಶೀರ್ವಾದ ಪಡೆದರು.
Scroll to load tweet…
ಈ ಬಾರಿಯ ಚುನಾವಣೆಯಲ್ಲಿ ಇಬ್ಬರೂ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಅಡ್ವಾಣಿ-ಜೋಷಿ ಮೋದಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು.
