ಭುವನೇಶ್ವರ(ಮಾ.21): 2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮ, ಮತದಾರರಿಗೆ ವಿವಿಧ ರಾಜಕೀಯ ಪಕ್ಷಗಳ ಆಮಿಷ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂಥ ಪ್ರಕರಣಗಳನ್ನು ಸಾರ್ವಜನಿಕರೇ ವರದಿ ಮಾಡಲು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಸಿಟಿಜನ್ಸ್‌ ವಿಜಿಲ್‌(ಸಿವಿಜಿಲ್‌) ಎಂಬ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ಆದರೆ, ಒಡಿಶಾದಲ್ಲಿ ಈ ಆ್ಯಪ್‌ ಮೂಲಕ ಚುನಾವಣಾ ನೀತಿ ಸಂಹಿತೆಯ ಪ್ರಕರಣ ದಾಖಲು ಬದಲು ಸಾರ್ವಜನಿಕರು ತಮ್ಮ ಸೆಲ್ಫಿ, ಮಕ್ಕಳ ಫೋಟೋ, ಪ್ರಾಣಿಗಳು ಮತ್ತು ಪೂರ್ಣಗೊಳ್ಳದ ರಸ್ತೆಗಳ ಫೋಟೋ ಹಾಕಿದ್ದಾರೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಚುನಾವಣಾ ನಿಯಂತ್ರಣ ಕೊಠಡಿಗೆ ಕರೆ ಮಾಡಿರುವ ಹಲವರು ತಮ್ಮ ಮೊಬೈಲ್‌ ಹಾಗೂ ಟೀವಿ ರಿಚಾಜ್‌ರ್‍ ಮಾಡಿಸುವಂತೆ ಸೇರಿದಂತೆ ಉಪಯೋಗಕ್ಕೆ ಬಾರದ ಬೇಡಿಕೆ ಇಟ್ಟಿದ್ದಾರೆ. ಸಿವಿಜಿಲ್‌ನಲ್ಲಿ ಸಲ್ಲಿಕೆಯಾದ 250ಕ್ಕೂ ಹೆಚ್ಚು ದೂರುಗಳ ಪೈಕಿ 150 ಬೋಗಸ್‌ ದೂರುಗಳಾಗಿವೆ. ಆದಾಗ್ಯೂ, ನೀತಿ ಸಂಹಿತೆಗೆ ಸಂಬಂಧಿಸಿದ 88 ಪ್ರಕರಣಗಳನ್ನು ಸರಿ ಪಡಿಸಿದ್ದೇವೆ ಎಂದಿದ್ದಾರೆ ಅಧಿಕಾರಿಗಳು.