ರಾಹುಲ್ ಸೊಂಟಕ್ಕೆ ಬಾಂಬ್ ಕಟ್ಟಿ ಉಡಾಯಿಸಬೇಕಿತ್ತು ಎಂದ ಪಂಕಜಾ| ವಾಯುದಾಳಿ ಸಾಕ್ಷಿ ಕೇಳಿದವರಿಗೆ ಉತ್ತರ ಸಿಗುತ್ತಿತ್ತು ಎಂದ ಸಚಿವೆ| ಬಿಜೆಪಿ ನಾಯಕಿ ಪಂಕಜಾ ಮುಂಡೆ ವಿವಾದಾತ್ಮಕ ಹೇಳಿಕೆ| ‘ರಾಹುಲ್ ಅವರ ಸೊಂಟಕ್ಕೆ ಬಾಂಬ್ ಕಟ್ಟಿ ಶತ್ರು ನೆಲದಲ್ಲಿ ಉಡಾಯಿಸಬೇಕಿತ್ತು’|ಪಂಕಜಾ ಮುಂಡೆ ಹೇಳಿಕೆ ಖಂಡಿಸಿದ ಕಾಂಗ್ರೆಸ್|
ಮುಂಬೈ(ಏ.22): ಬಾಲಾಕೋಟ್ ವಾಯುದಾಳಿ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಬಾಂಬ್ ಜೊತೆ ಕಟ್ಟಿ ಉಡಾಯಿಸಬೇಕಿತ್ತು ಎಂದು ಬಿಜೆಪಿ ನಾಯಕಿ ಪಂಕಜಾ ಮುಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಅವರ ಸೊಂಟಕ್ಕೆ ಬಾಂಬ್ ಕಟ್ಟಿ ಶತ್ರು ನೆಲದಲ್ಲಿ ಉಡಾಯಿಸಬೇಕಿತ್ತು. ಆಗ ವಾಯುದಾಳಿ ಕುರಿತು ಸಾಕ್ಷ್ಯ ಕೇಳುತ್ತಿರುವವರಿಗೆ ಸಮಾಧಾನವಾಗುತ್ತಿತ್ತು ಎಂದು ಪಂಕಜಾ ಮುಂಡೆ ಹೇಳಿದ್ದಾರೆ.
Scroll to load tweet…
ಜಲ್ನಾ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಸಚಿವೆ ಪಂಕಜಾ ಮುಂಡೆ, ರಾಹುಲ್ ಗೆ ಬಾಂಬ್ ಕಟ್ಟಿ ಉಡಾಯಿಸಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಪಂಕಜಾ ಮುಂಡೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಸಚಿವರು ರಾಜಕೀಯ ಆರೋಪ ಪ್ರತ್ಯಾರೋಪಗಳ ಘನತೆಯನ್ನೂ ಕುಂದಿಸಿದ್ದಾರೆ ಎಂದು ಹರಿಹಾಯ್ದಿದೆ.
