ದೇಶದಲ್ಲಿ ಮಹಾಸಂಗ್ರಾಮವಾದ ಲೋಕಸಭಾ ಚುನಾವಣೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆ ನಡೆದಿದೆ. ಇದೇ ವೇಳೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಾಕ್ ಪುಲ್ವಾಮ ದಾಳಿ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸಹಾಯ ಮಾಡಲು ನಡೆದಿದ್ದು ಎಂದು ವಿವಾದಿ ತ ಹೇಳಿಕೆ ನೀಡಿದ್ದಾರೆ. 

ನವದೆಹಲಿ : ಪುಲ್ವಾಮದಲ್ಲಿ ಪಾಕಿಸ್ತಾನ ಭಾರತೀಯ ಸೇನಾ ಪಡೆ ಮೇಲೆ ದಾಳಿ ಮಾಡಿ 40 ಯೋಧರ ಹತ್ಯೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭಾ ಚುನಾವಣೆಯಲ್ಲಿ ಸಹಾಯ ಮಾಡಲು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ದೇಶದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ 18 ರಾಜ್ಯಗಳಲ್ಲಿ ಆರಂಭವಾದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. 

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲೇ, ಈ ಹೇಳಿಕೆ ನೀಡಿದ ಕೇಜ್ರಿವಾಲ್ ಇಮ್ರಾನ್ ಖಾನ್ ಹಾಗೂ ಮೋದಿ ನಡುವೆ ಕೆಲವು ಸೀಕ್ರೆಟ್ ಗಳಿಗೆ ಎಂದಿದ್ದು, ನಮೋ ಟಿವಿಗೆ ಪಾಕಿಸ್ತಾನ ನೆರವು ನೀಡುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. 

Scroll to load tweet…

ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮುಂದಿನ ಸರ್ಕಾರ ಭಾರತದಲ್ಲಿ ಮೋದಿ ನೇತೃತ್ವದಲ್ಲಿದ್ದರೆ ಕಾಶ್ಮೀರ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಆದರೆ ಕಾಂಗ್ರೆಸ್ ಆದಲ್ಲಿ ಈ ವಿಚಾರದಲ್ಲಿ ಅಂಜಿಕೆಯಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದು, ಈ ಸಂಬಂಧ ಕೇಜ್ರಿವಾಲ್ ಕುಟುಕಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.