‘ಮೋದಿಲೈ’ ಎಂಬ ಪದವನ್ನೇ ಆಕ್ಸ್‌ಫರ್ಡ್‌ ಡಿಕ್ಷನರಿಗೆ ಸೇರಿಸಲಾಗಿದೆ ಎಂದ ರಾಹುಲ್| ನಮ್ಮ ಬಳಿ ‘ಮೋದಿಲೈ’ ಪದ ಇಲ್ಲ: ರಾಹುಲ್‌ಗೆ ಆಕ್ಸ್‌ಫರ್ಡ್‌ ಡಿಕ್ಷನರಿ ತಿರುಗೇಟು| 

ನವದೆಹಲಿ[ಮೇ.17]: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಾಗಿ ಹೊಸ-ಹೊಸ ಪದಗಳನ್ನು ಬಳಕೆ ಮಾಡುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇನೋ ‘ಮೋದಿಲೈ’ ಎಂಬ ಪದವನ್ನೇ ಆಕ್ಸ್‌ಫರ್ಡ್‌ ಡಿಕ್ಷನರಿಗೆ ಸೇರಿಸಲಾಗಿದೆ ಎಂದು ಮೋದಿ ಬಗ್ಗೆ ವ್ಯಂಗ್ಯವಾಡಿದ್ದರು.

Scroll to load tweet…

ಆದರೆ, ರಾಹುಲ್‌ ಗಾಂಧಿ ಅವರ ಟ್ವೀಟ್‌ಗೆ ಟ್ವೀಟರ್‌ನಲ್ಲೇ ಪ್ರತಿಕ್ರಿಯೆ ನೀಡಿದ ಆಕ್ಸ್‌ಫರ್ಡ್‌ ಡಿಕ್ಷನರಿ, ‘ಮೋದಿಲೈ ಎಂಬ ಪದವನ್ನೇ ನಾವು ನಮ್ಮ ಯಾವುದೇ ಡಿಕ್ಷನರಿಯಲ್ಲಿ ಸೇರ್ಪಡೆ ಮಾಡಿಲ್ಲ. ಹಾಗಾಗಿ, ಈ ಫೋಟೋ(ರಾಹುಲ್‌ ಲಗತ್ತಿಸಿದ ಫೋಟೋಶಾಪ್‌ ಚಿತ್ರ)ದಲ್ಲಿ ನಮ್ಮ ಡಿಕ್ಷನರಿಯಲ್ಲಿ ‘ಮೋದಿಲೈ’ ಪದವಿದೆ ಎಂಬುದು ಸುಳ್ಳು ಎಂಬುದನ್ನು ಖಚಿತಪಡಿಸುತ್ತೇವೆ,’ ಎಂದು ಸ್ಪಷ್ಟನೆ ನೀಡಿದೆ.

Scroll to load tweet…

ಪ್ರಧಾನಿ ಮೋದಿ ಅವರ ಬಗ್ಗೆ ಲೇವಡಿ ಮಾಡುವ ಸಲುವಾಗಿ ಆಕ್ಸ್‌ಫರ್ಡ್‌ ಡಿಕ್ಷನರಿ ರೂಪದ ಫೋಟೋಶಾಪ್‌ನಲ್ಲಿ ಮೋದಿಲೈ ಎಂಬ ಪದವಿರುವಂತೆ ಬಿಂಬಿಸಿ, ಅದಕ್ಕೆ ಪದೇ-ಪದೇ ಸತ್ಯವನ್ನು ತಿರುಚುವುದು ಎಂಬ ಅರ್ಥವಿರುವಂತೆ ತೋರಿಸಿದ ಚಿತ್ರವನ್ನು ರಾಹುಲ್‌ ಟ್ವೀಟ್‌ ಮಾಡಿದ್ದರು.