ಸಾಧ್ವಿ ಬಿಜೆಪಿಯ ಹೆಲ್ತ್ ಮಿನಿಸ್ಟರ್ ಅಭ್ಯರ್ಥಿ ಎಂದ ಒವೈಸಿ| ಗೋಮೂತ್ರ ಸೇವೆನೆಯಿಂದ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾಗಿ ಹೇಳಿದ್ದ ಸಾಧ್ವಿ| ಸಾಧ್ವಿ ಹೇಳಿಕೆಯನ್ನು ವ್ಯಂಗ್ಯವಾಡಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ| 'ಸಾಧ್ವಿ ಬಿಜೆಪಿಯ ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆ'|
ಹೈದರಾಬಾದ್(ಏ.25): ಗೋಮೂತ್ರ ಸೇವೆನಯಿಂದ ತಾವು ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾಗಿ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ಗೋಮೂತ್ರ ಸೇವನೆಯಿಂದ ಸ್ತನ ಕ್ಯಾನ್ಸರ್‌ನಿಂದ ಪಾರಾದ ಸಾಧ್ವಿ ಪ್ರಜ್ಞಾ ಆರೋಗ್ಯ ಸಚಿವೆ ಅಭ್ಯರ್ಥಿ ಎಂದು ವ್ಯಂಗ್ಯವಾಡಿದ್ದಾರೆ.
Scroll to load tweet…
ಸಾಧ್ವಿ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಈಗಲೇ ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆಯನ್ನು ನಿರ್ಧರಿಸಿದೆ ಎಂದು ಒವೈಸಿ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.
