Asianet Suvarna News Asianet Suvarna News

ಸಾರಿಗೆ ಸಿಬ್ಬಂದಿಗಿಲ್ಲ ಮತದಾನದ ಅವಕಾಶ: ಅಂಚೆ ಮತಪತ್ರಕ್ಕೆ ಆಯೋಗ ಮುಂದಗುತ್ತಾ?

ಬಾಗಲಕೋಟೆ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಸಾರಿಗೆ ನೌಕರರಿಗೆ ಸಿಗಲಿಲ್ಲ ಮತದಾನ ಭಾಗ್ಯ| ಆಯೋಗದ ನಿಯಮಗಳಿಂದಾಗಿ ಮತದಾನದಿಂದಲೇ ದೂರ ಉಳಿದ ಸಿಬ್ಬಂದಿ| ಚುನಾವಣೆ ಕರ್ತವ್ಯ ನಿರತರಿಗೆ ಮಾತ್ರ ಇಡಿಸಿ ಪತ್ರ| ಅಂಚೆ ಮತಪತ್ರ ಹಾಕೋರಿಗೆ ಇನ್ನೂ ಇದೆ ಅವಕಾಶ, ಈಗಲಾದ್ರೂ ಆಯೋಗ ಮನಸ್ಸು ಮಾಡುವುದೇ?|ಈಗಲಾದ್ರೂ ಅಂಚೆಮತಕ್ಕೆ ಅವಕಾಶ ನೀಡ್ತಾರಾ ಚುನಾವಣಾಧಿಕಾರಿಗಳು?|

Over 300 KSRTC Staff Missed To Cast their Vote in Loksabha Elections
Author
Bengaluru, First Published Apr 26, 2019, 3:24 PM IST

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಏ.26): ಸಾಮಾನ್ಯವಾಗಿ ಮತದಾನ ಹೆಚ್ಚಿಸಿಲೆಂದೇ ಅಧಿಕಾರಿ ವರ್ಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿವಿಧ ರೀತಿಯಲ್ಲಿ ಜಾಗೃತಿಯಂತ ಕಾರ್ಯಕ್ರಮ ಹಾಕಿಕೊಂಡು ಮತದಾನ ಜಾಗೃತಿಗೆ ಶ್ರಮಿಸುತ್ತಿದೆ.

ಇತ್ತ ಕಣ್ಣೆದುರೇ ಸಾರಿಗೆ ಸಿಬ್ಬಂದಿ ಮತದಾನದಿಂದ ವಂಚಿತರಾದರೂ ಯಾರೂ ಕೇಳುವವರಲ್ಲಿದಂತಾಗಿದೆ. ಪ್ರತಿಬಾರಿ ಚುನಾವಣೆ ಬಂದಾಗಲೂ ಶೇ.30ರಷ್ಟು ಸಾರಿಗೆ ಸಿಬ್ಬಂದಿ ಮಾತ್ರ ಮತದಾನ ಮಾಡಲು ಆಗುತ್ತಿಲ್ಲ. 

ಹೌದು. ಲೋಕಸಭಾ ಚುನಾವಣೆ ಅಂದ್ರೆ ಅದು ಪ್ರಜಾಪ್ರಭುತ್ವದ ದೊಡ್ಡಹಬ್ಬ. ಇದರಲ್ಲಿ ಮತದಾನಕ್ಕೆ ಅರ್ಹರಾದವರು ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಹೀಗಂತ ಪ್ರತಿಬಾರಿ ಚುನಾವಣೆ ಬಂದಾಗಲೂ ಅಧಿಕಾರಿ ವರ್ಗ ಮತದಾನ ಜಾಗೃತಿಗೆ ಅಂತ ಕೋಟ್ಯಂತರ ಖರ್ಚು ಮಾಡಿ ಜಾಗೃತಿ ಮಾಡುತ್ತೆ.

"

ಆದರೆ ಪ್ರತಿಬಾರಿ ಚುನಾವಣೆ ಬಂದಾಗ ಮತದಾನದಿಂದ ವಂಚಿತರಾಗುವ ಸಾರಿಗೆ ಸಿಬ್ಬಂದಿ ಬಗ್ಗೆ ಮಾತ್ರ ಯಾರೂ ಕ್ಯಾರೆ ಅಂತಿಲ್ಲ. ಚುನಾವಣೆ ದಿನ ಸಿಬ್ಬಂದಿ ಕೊಂಡೊಯ್ಯೋಕೆ ಅಂತ ಕರ್ತವ್ಯದ ಮೇಲೆ ನಿಯೋಜನೆ ಆಗೋ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಸಿಬ್ಬಂದಿಗೆ ಮಾತ್ರ ಚುನಾವಣೆ ಕರ್ತವ್ಯ ಪತ್ರ ಮತ್ತು ಪೋಸ್ಟಲ್ ಮತಕ್ಕೆ ಅವಕಾಶ ನೀಡಲಾಗುತ್ತೆ.

ಆದರೆ ಇವರೊಂದಿಗೆ ಮತದಾನದ ದಿನವೂ ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿಗೆ ಮಾತ್ರ ಈ ಭಾಗ್ಯ ಇಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನಕ್ಕೆ ಬಂದಿಲ್ಲ. ಬಾಗಲಕೋಟೆ ಜಿಲ್ಲೆಯೊಂದರಲ್ಲಿ ಅಂದಾಜು 300ಕ್ಕೂ ಅಧಿಕ ಜನ ಸಾರಿಗೆ ಸಿಬ್ಬಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅಂತ ಸಿಬ್ಬಂದಿಗೆ ಅಂಚೆಮತದ ಅವಕಾಶ ನೀಡಬೇಕು ಅಂತಾರೆ ಸಾರಿಗೆ ಯೂನಿಯನ್ ಜಿಲ್ಲಾಧ್ಯಕ್ಷ ಸಿ.ವಿ.ಸಿಕ್ಕೇರಿ.

"

ಇನ್ನು ಮತದಾನದ ದಿನದಂದು ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನೂ ನಿಲ್ಲಿಸೋಕೆ ಆಗೋದಿಲ್ಲ, ಬದಲಾಗಿ ಆ ಕಾರ್ಯವೂ ನಿರ್ವಹಣೆ ಆಗಬೇಕಾಗುತ್ತೇ. ಹೀಗಾಗಿ ಬೆಳಿಗ್ಗೆ ಹೋಗೋ ಸಿಬ್ಬಂದಿ ಮರುದಿನವೇ ಮೂಲ ಸ್ಥಳಕ್ಕೆ ಆಗಮಿಸ್ತಾರೆ. ಇದ್ರಿಂದ ಸಾರಿಗೆ ಸಿಬ್ಬಂದಿ ಮತದಾನದ ಕರ್ತವ್ಯದಿಂದ ದೂರವೇ ಉಳಿಯಬೇಕಾಗುತ್ತೆ.

ಹೀಗಾಗಿ ಈಗಾಗಲೇ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರೋ ಜಿಲ್ಲಾಧಿಕಾರಿಗಳಿಗೂ ಸಹ ಸಾರಿಗೆ ಸಂಘಟನೆ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕರು ಅರ್ಜಿಗಳನ್ನು ಬರೆಯುವ ಮೂಲಕ ಮನವಿಯನ್ನ ಮಾಡಿಕೊಂಡಿದ್ದಾರೆ.

ಈ ಮಧ್ಯೆ ಪೋಸ್ಟಲ್ ಮತಗಳನ್ನ ಹಾಕೋಕೆ ಇನ್ನೂ ಅವಕಾಶವಿದ್ದು,ಈಗಲಾದ್ರೂ ಚುನಾವಣಾ ಆಯೋಗಕ್ಕೆ ಸಮಸ್ಯೆಯ ಬಗ್ಗೆ ತಿಳಿಸಿ ಮತದಾನದಿಂದ ವಂಚಿತರಾಗಿರೋ ಸಾರಿಗೆ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಬೇಕು ಅಂತಾರೆ ಸಾಮಾಜಿಕ ಕಾರ್ಯಕರ್ತರು.

"

ಒಟ್ಟಿನಲ್ಲಿ ಮತದಾನ ಜಾಗೃತಿಗೆ ಅಂತ ಕೋಟ್ಯಂತರ ಖರ್ಚು ಮಾಡೋ ಅಧಿಕಾರಿಗಳು ಮತದಾನದಿಂದ ವಂಚಿತರಾಗೋ ಸಾರಿಗೆ ಸಿಬ್ಬಂದಿಗೂ ಸಹ ಅವಕಾಶ ಒದಗಿಸುವಂತಹ ಪ್ರಯತ್ನವನ್ನ ಮಾಡಬೇಕಿದೆ.

Follow Us:
Download App:
  • android
  • ios