ಇವಿಎಂ ಮತಯಂತ್ರವನ್ನು ತಿರುಚಲಾಗುತ್ತಿದೆ ಎಂಬ ಆರೋಪ ಹಿನ್ನೆಲೆ| ರಾತ್ರಿಯೀಡಿ ಸ್ಟ್ರಾಂಗ್ ರೂಮ್ ಕಾದು ಕುಳಿತ ವಿಪಕ್ಷ ಕಾರ್ಯಕರ್ತರು| ದುರ್ಬಿನ್ ಮೂಲಕ ಸ್ಟ್ರಾಂಗ್ ರೂಮ್ ಮೇಲೆ ನಿಗಾ| ತಡರಾತ್ರಿ ಸ್ಟ್ರಾಂಗ್ ರೂಮ್ ಭದ್ರತೆ ಪರಿಶೀಲಿಸಿದ ದಿಗ್ವಿಜಯ್ ಸಿಂಗ್|

ನವದೆಹಲಿ(ಮೇ.22): ಇವಿಎಂ ಮತಯಂತ್ರವನ್ನು ತಿರುಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಹಲವು ರಾಜ್ಯಗಳಲ್ಲಿ ವಿಪಕ್ಷಗಳು ರಾತ್ರಿಯೀಡಿ ಸ್ಟ್ರಾಂಗ್ ರೂಮ್ ಕಾದಿರುವ ವಿಚಿತ್ರ ಘಟನೆ ನಡೆದಿದೆ.

ಉತ್ತರಪ್ರದೇಶದ ಹಲವೆಡೆ ಇವಿಎಂ ಮತಯಂತ್ರಗಳನ್ನು ಇಡಲಾಗಿರುವ ಸ್ಟ್ರಾಂಗ್ ರೂಮ್ ಬಳಿ ರಾತ್ರಿಯೀಡಿ ಬಿಡಾರ ಹೂಡಿದ್ದ ವಿಪಕ್ಷಗಳ ಕಾರ್ಯಕರ್ತರು, ಇವಿಎಂ ಮತಯಂತ್ರಗಳನ್ನು ಕಾದರು.

Scroll to load tweet…

ಅದರಂತೆ ಮೀರಟ್ ನಲ್ಲಿ ಎಸ್‌ಪಿ-ಬಿಎಸ್ ಪಿ ಅಭ್ಯರ್ಥಿ ಯಾಸೀನ್ ಖುರೇಷಿ ಬೆಂಬಲಿಗರು ದುರ್ಬಿನ್ ಮೂಲಕ ಮತಯಂತ್ರ ಇರಿಸಲಾಗಿದ್ದ ಸ್ಟ್ರಾಂಗ್ ರೂಮ್ ಮೇಲೆ ನಿಗಾ ಇರಿಸಿದ್ದು ವಿಶೇಷವಾಗಿತ್ತು.

Scroll to load tweet…

ಇನ್ನು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ನಿನ್ನೆ ತಡರಾತ್ರಿ ಮತಯಂತ್ರ ಇರಿಸಲಾಗಿದ್ದ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು.

ಅಲ್ಲದೇ ಹರಿಯಾಣದಲ್ಲೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಸ್ಟ್ರಾಂಗ್ ರೂಮ್‌ಗಳನ್ನು ಕಾದು ಗಮನ ಸೆಳೆದರು. ಒಟ್ಟಿನಲ್ಲಿ ಇವಿಎಂ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ವಿಪಕ್ಷಗಳು ಸ್ಟ್ರಾಂಗ್ ರೂಮ್‌ಗಳನ್ನು ಕಾಯುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.