'ಸ್ವರ್ಗಕ್ಕೆ ಹೋಗಲು ಇಚ್ಛಿಸುವರು ದೇವೇಗೌಡ್ರನ್ನ ವಿರೋಧಿಸಿದ್ರೆ ಸಾಕು‌'

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Apr 2019, 4:38 PM IST
oppose To devegowda and reach heaven Says suresh kumar In Twitter
Highlights

ನನ್ನನ್ನು ವಿರೋಧಿಸಿದವರೆಲ್ಲಾ ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವ ಶಕ್ತಿ ಇರುವುದರಿಂದ ನಾನಿನ್ನೂ ಬದುಕಿದ್ದೇನೆ ಎಂದು ದೇವೇಗೌಡರ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು, (ಏ.21): ಸ್ವರ್ಗಕ್ಕೆ ತಲುಪಲು ಬಯಸುವವರು ದೇವೇಗೌಡರನ್ನು ವಿರೋಧಿಸಿದರೆ ಸಾಕು ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ನನ್ನನ್ನು ವಿರೋಧಿಸಿದವರೆಲ್ಲಾ ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವ ಶಕ್ತಿ ಇರುವುದರಿಂದ ನಾನಿನ್ನೂ ಬದುಕಿದ್ದೇನೆ ಎಂದು ದೇವೇಗೌಡರ ಹೇಳಿಕೆಗೆ ಬಿಜೆಪಿ ಶಾಸಕ ಸುರೆಶ್ ಕುಮಾರ್ ಟ್ವೀಟ್ ಮೂಲಕ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋ ಸಿಂಪಲ್‌..ಯಾರು ಸ್ವರ್ಗಕ್ಕೆ ತಲುಪಲು ಇಚ್ಛಿಸುತ್ತಾರೋ ಅವರು ದೇವೇಗೌಡರನ್ನು ವಿರೋಧಿಸಿದರೆ ಸಾಕು. ದೇವೇಗೌಡರೇ ಪಾಸ್‌ಪೋರ್ಟ್‌, ವೀಸಾ ಎಲ್ಲವನ್ನೂ ವ್ಯವಸ್ಥೆ ಮಾಡಿ ಸ್ವರ್ಗಕ್ಕೆ ತಲುಪಿಸುತ್ತಾರೆ ಎಂದು ಟ್ವೀಟ್‌ ಮಾಡಿ ವ್ಯಂಗ್ಯವಾಡಿದ್ದಾರೆ.

loader