ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಇತ್ತ ಸಿಎಂ ಪುತ್ರಿ ವಿರುದ್ಧ ನಿಜಾಮಬಾದ್ ನಲ್ಲಿ ಸ್ಪರ್ಧೆ ಮಾಡಿರುವ ರೈತರು ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. 

ಹೈದರಾಬಾದ್: ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳ ಗಮನ ಸೆಳೆಯುವ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ವಿರುದ್ಧವೇ ಅಖಾಡಕ್ಕಿಳಿದ 179 ರೈತರು ಏ.9 ರಂದು ಬೃಹತ್ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ರೈತರಲ್ಲಿರುವ ಐಕ್ಯತೆ ಭಾವನೆಯನ್ನು ತೋರಿಸುವ ನಿಟ್ಟಿನಲ್ಲಿ ನಿಜಾಮಾಬಾದ್‌ನ ಬಳಿಯಿರುವ ಅರ್ಮೂರ್ ಎಂಬಲ್ಲಿ ಬುಧವಾರ ಸಾರ್ವಜನಿಕ ಸಭೆ ನಡೆಸಲಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದರು.

ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಹಾಗೂ 179 ರೈತರು ಸೇರಿದಂತೆ ಒಟ್ಟು 185 ಮಂದಿ ಸ್ಪರ್ಧಿಸಿದ್ದಾರೆ.