Asianet Suvarna News Asianet Suvarna News

ನಾವು ಕೆಲ್ಸ ಮಾಡಿರದಿದ್ರೆ ಬೇರೆ ಪಕ್ಷಕ್ಕೆ ವೋಟ್ ಹಾಕಿ: ಗಡ್ಕರಿ!

‘ನಮ್ಮ ಸಾಧನೆ ಕಳೆಪೆ ಎಂದೆನಿಸಿದರೆ ಬೇರೆ ಪಕ್ಷಕ್ಕೆ ಮತ ಹಾಕಿ’|ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ| ‘ನಾವು ಉತ್ತಮ ಆಡಳಿತ ನೀಡಿಲ್ಲ ಎಂದಾದರೆ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತನ್ನಿ’|ಜನ ಕೇಂದ್ರ ಸರ್ಕಾರದ ಸಾಧನೆ ಗುರುತಿಸಿ ಮತ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ| 

Nitin Gadkari Says Vote For Another Party If BJP Failed To Perform Well
Author
Bengaluru, First Published Apr 6, 2019, 1:51 PM IST

ನವದೆಹಲಿ(ಏ.06): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 5 ವರ್ಷದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿಲ್ಲ ಎಂದು ಎಂದೆನಿಸಿದರೆ ಬೇರೆ ಪಕ್ಷಕ್ಕೆ ಮತ ಹಾಕುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗಡ್ಕರಿ, ಬಿಜೆಪಿ ಸರ್ಕಾರದ ಸಾಧನೆ ಕಳಪೆ ಎಂದೆನಿಸಿದರೆ ಮತದಾರ ಬೇರೆ ಪಕ್ಷಕ್ಕೆ ಮತಹಾಕಬಹುದು ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಎಂದರೆ ಸರ್ಕಾರವೊಂದರ 5 ವರ್ಷದ ಆಡಳಿತಾವಧಿಯ ಪರಾಮರ್ಶೆಯಾಗಿದ್ದು, ಜನ ನಮ್ಮ ಸರ್ಕಾರದ ಸಾಧನೆ ಗುರುತಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಗಡ್ಕರಿ ಹೇಳಿದ್ದಾರೆ.

Follow Us:
Download App:
  • android
  • ios