ನವದೆಹಲಿ(ಮೇ.10): ಬಿಜೆಪಿ ತತ್ವ ಮತ್ತು ಸಿದ್ದಾಂತ ಆಧಾರಿತ ಪಕ್ಷವಾಗಿದ್ದು, ಅದು ಎಂದಿಗೂ ವ್ಯಕ್ತಿ ಕೇಂದ್ರಿತ ಪಕ್ಷವಾಗಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಾಗುವತ್ತ ಹೆಜ್ಜೆ ಇಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಬಿಜೆಪಿ ಎಂದಿಗೂ ಮೋದಿ-ಶಾ ಕೇಂದ್ರಿತ ಪಕ್ಷವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷ ಈ ಹಿಂದೆ ಅಟಲ್ ಅಥವಾ ಅಡ್ವಾಣಿ ಅವರ ಪಕ್ಷ ಆಗಿರಲಿಲ್ಲ, ಇನ್ನು ಮುಂದೆ ಮೋದಿ-ಅಮಿತ್ ಶಾ ಪಕ್ಷವೂ ಆಗಲ್ಲ ಎಂದು ನಿತಿನ್ ಗಡ್ಕರಿ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನು ಈ ಬಾರಿ ಅತಂತ್ರ ಲೋಕಸಭೆ ಸೃಷ್ಟಿಯಾಗಲಿದೆ ಎಂಬ ವಾದವನ್ನು ತಳ್ಳಿಹಾಕಿರುವ ಗಡ್ಕರಿ, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ