‘ಅಳುವ ಮಗ ನಾನಲ್ಲ, ದೇವೇಗೌಡರ ಮೊಮ್ಮಗ’

ರಾಜಕೀಯ ವ್ಯವಸ್ಥೆಗೆ ಹೆದರಿ ಅಳುವ ಮಗ ನಾನಲ್ಲ. ಎದೆಗುಂಡಿಗೆ ಗಟ್ಟಿಗೆ ಇರೋ ದೇವೇಗೌಡರ ಮೊಮ್ಮಗ ಎಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಇರುವವರೆಗೂ ನಾನು ಯಾವತ್ತೂ ಕಣ್ಣೀರು ಹಾಕುವುದಿಲ್ಲ ಎಂದರು

ವ್ಯಂಗ್ಯ ಬೇಡ, ಮತ್ತೆ ಕಣ್ಣೀರು ಹಾಕಲ್ಲ: ಗೌಡ

‘ಅಲ್ಲಿ(ಹಾಸನ) ಒಬ್ಬ ಮೊಮ್ಮಗನಿಗೆ ಕಣ್ಣೀರು ಹಾಕಿದೆ. ಇಲ್ಲಿ(ಮಂಡ್ಯ) ಮತ್ತೆ ಕಣ್ಣೀರು ಹಾಕಲ್ಲ’ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಹೇಳಿದರು. ಗುರುವಾರ ನಡೆದ ಮಂಡ್ಯ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಘೋಷಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಆ ಹಳ್ಳಿಯ ಜನರ ಜೊತೆ ಭಾವನಾತ್ಮಕ ಸಂಬಂಧ ಇತ್ತು. ಆದ್ದರಿಂದ ಉದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದೆ. ಇಲ್ಲಿ ಮತ್ತೆ ಕಣ್ಣೀರು ಹಾಕಲ್ಲ. ವ್ಯಂಗ್ಯ ಮಾಡಬೇಡಿ ಎಂದರು.

ಗುಲಾಮನಾಗಿ ಸೇವೆಗೆ ಅವಕಾಶ ಕೊಡಿ: ನಿಖಿಲ್

ನಮ್ಮ ತಂದೆ ಕುಮಾರಸ್ವಾಮಿ ಅವರನ್ನು ಮಂಡ್ಯ ಜನ ಮನೆ ಮಗನಂತೆ ನೋಡ್ತಾರೆ. ಹತ್ತು ಜನ್ಮ ಹೆತ್ತು ಬಂದರೂ ಮಂಡ್ಯದ ಜನರ ಋಣ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ತಂದೆ ಹೇಳುತ್ತಲೇ ಇರುತ್ತಾರೆ. ಇದು ಅಕ್ಷರಶಃ ಒಪ್ಪುವ ಮಾತು. ನಿಮ್ಮ ಗುಲಾಮನಾಗಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನನಗೆ ಟಿಕೆಟ್ ಕೊಡುವ ಮುನ್ನ ಮಂಡ್ಯ ಜಿಲ್ಲೆಯ ಜೆಡಿಎಸ್ ಎಲ್ಲಾ ಶಾಸಕರು, ನಾಯಕರ ಜೊತೆ ಚರ್ಚಿಸಿಯೇ ಟಿಕೆಟ್ ನೀಡಿದ್ದಾರೆ. ನಾನು ಸ್ವಾರ್ಥಕ್ಕಾಗಿ ರಾಜ ಕೀಯಕ್ಕೆ ಬಂದಿಲ್ಲ. ಸಾಮಾಜಿಕ ಜಾಲತಾ ಣದಲ್ಲಿ ಗೋ ಬ್ಯಾಕ್ ನಿಖಿಲ್ ಎಂಬ ಸ್ಟೇಟಸ್ ಹಾಕಿದ್ದಾರೆ. ಇಲ್ಲಿ ಸಹಸ್ರಾರು ಜನ ಸೇರಿದ್ದೀರಿ. ನಾನು ಮುಂದೆ ಬರಬೇಕೋ ಅಥವಾ ಹಿಂದೆ ಸರಿಯ ಬೇಕೋ ನೀವೇ ನಿರ್ಧರಿಸಿ ಎಂದರು.