ಬೆಂಗಳೂರು :  ರಾಜ್ಯದಲ್ಲಿ ಹೊಸ ಸರ್ಕಾರ, ಹೊಸ ಮುಖ್ಯಮಂತ್ರಿ ಕುರಿತಾಗಿ ವಿವಿಧ ನಾಯಕರಿಂಗ ಬಹಿರಂಗ ಹೇಳಿಕೆಗಳ ಸರಣಿ ಮುಂದುವರಿದಿದೆ. 

‘ಈ ಬಾರಿ ಬಿಜೆಪಿಗೆ ಒಂದು ಮತ ಹಾಕಿದರೆ, ಎರಡು ಸರ್ಕಾರ ಬರುತ್ತದೆ’ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಶಾಸಕ ವಿ.ಸೋಮಣ್ಣ ಅವರು, ಮೇ 23ರ ನಂತರ ಸಿಎಂ ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆಯ ಸಾಧ್ಯತೆ ಇದೆ ಎಂದಿದ್ದಾರೆ. 

ಇದೇ ವೇಳೆ, ಕಳೆದೆರಡು ದಿನಗಳಿಂದ ತಾವೇ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಿರುವ ಕಾಂಗ್ರೆಸ್‌ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಶನಿವಾರವೂ ತಾವು ಸಕ್ರಿಯ ರಾಜಕಾರಣದಲ್ಲಿರುವ ವ್ಯಕ್ತಿ. ಸನ್ಯಾಸಿ ಅಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.