ಬಿಲಾಸ್‌ಪುರ್(ಮೇ.16): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ ಇದ್ದ ಹಾಗೆ ಹಾಗೂ ನಾನು ಅವರ ಎಕೆ-47 ಇದ್ದ ಹಾಗೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಹೇಳಿದ್ದಾರೆ.

ಹಿಮಾಚಲಪ್ರದೇಶದ ಬಿಲಾಸ್‌ಪುರ್ ದಲ್ಲಿ ಮಾತನಾಡಿದ ಸಿಧು, 2014ರಲ್ಲಿ ಗಂಗಾ ಪುತ್ರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, 2019ರಲ್ಲಿ ರಫೆಲ್ ಏಜೆಂಟ್ ಎಂಬ ಹಣೆಪಟ್ಟಿ ಹೊತ್ತು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ರಫೆಲ್ ಹಗರಣದ ಕುರಿತು ದೇಶದ ಯಾವುದೇ ಭಾಗದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಸಿಧು ಸವಾಲೆಸೆದರು. 

ನಾ ಖಾವುಂಗಾ, ನಾ ಖಾನೆ ದೂಂಗಾ(ಭ್ರಷ್ಟಾಚಾರ ಮಾಡಲ್ಲ, ಮಾಡಲು ಬಿಡುವುದಿಲ್ಲ) ಎಂದು ಪೋಸು ಕೊಡುವ ಪ್ರಧಾನಿ ಮೋದಿ, ರಫೆಲ್ ಒಪ್ಪಂದದಲ್ಲಿ ತಿಂದು ತೇಗಿದ್ದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಸಿಧು ಹರಿಹಾಯ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ