ನವದೆಹಲಿ : ಮೋದಿ ಸೋಲಿಸಲು ಮುಸ್ಲಿಂ ಮತಗಳು ವಿಭಜನೆಯಾದಂತೆ ನೋಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧುಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. 

ಒಟ್ಟು 72 ಗಂಟೆಗಳ ಕಾಲ ಯಾವುದೇ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ  ನಿಷೇಧಿಸಿದೆ. 

ಅಲ್ಲದೇ ಚುನಾವಣಾ ಆಯೋಗವು ಸಿಧು ಹೇಳಿಕೆಯನ್ನು ಕಠುವಾಗಿ ಖಂಡಿಸಿದೆ. ಸಾರ್ವಜನಿಕ ಸಭೆ, ರೋಡ್ ಶೋ,  ಸಮಾವೇಶ, ಸಂದರ್ಶನದಲ್ಲಿ ಪಾಲ್ಗೊಳ್ಳದಂತೆ ಆದೇಶಿಸಿದೆ. 

ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಆದ ನವಜೋತ್ ಸಿಂಗ್ ಸಿಧುಗೆ ನಿಷೇಧ ಹೇರಿಕೆಯಿಂದ ಪ್ರಚಾರ ಮಾಡಲು ತೊಡಕುಂಟಾಗಿದೆ. 

ಕಳೆದ ವಾರ ಬಿಹಾರದ ಕತಿಹಾರ್ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ  ಮುಸ್ಲಿಂ ಸಹೋದರರೇ ನಿಮಗೆ ಹೇಳುವುದೇನೆಂದರೆ ಮುಸ್ಲಿಂ ಮತಗಳನ್ನು ವಿಭಜನೆ ಮಾಡಲು ಸಾಕಷ್ಟು ಜನರಿದ್ದಾರೆ. ಆದ್ದರಿಂದ  ನಿಮ್ಮ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು. ಮೋದಿ ಸೋಲಿಸುವ ನಿಟ್ಟಿನಲ್ಲಿ ಮತ ವಿಭಜನೆ ಮಾಡದಿರಿ ಎಂದು ಹೇಳಿದ್ದರು. ಪ್ರತಿಕ್ರಿಯೆ ನೀಡಲು ಸೂಚಿಸಿದ್ದ ಚುನಾವಣಾ ಆಯೋಗ ಇದೀಗ 72 ಗಂಟೆಗಳ ಕಾಲ ನಿಷೇಧ ಹೇರಿದೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28