ಚಿತ್ರದುರ್ಗ (ಏ. 15): ಬಿಜೆಪಿಗೆ ನೇಷನ್ ಫಸ್ಟ್‌ ಆದ್ರೆ, ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ಫಸ್ಟ್ ಎಂದು  ಬಿಜೆಪಿ ವಕ್ತಾರೆ ಮಾಳವಿಕಾ ಹೇಳಿದ್ದಾರೆ. 

ರಾಜ್ಯದಲ್ಲಿ ಮಂಡ್ಯ ಬಿಟ್ಟು ಬೇರೆಲ್ಲೂ ಚುನಾವಣೆ ನಡೆಯುತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ, ಸಿಎಂ, ಸಚಿವರು ಸೇರಿದಂತೆ ಹಲವಾರು ಜನ ಒಂದೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ನಾಡಿನ ಮುಖ್ಯಮಂತ್ರಿ ಆಗುವ ಬದಲು ನಿಖಿಲ್ ತಂದೆಯಾಗಿದ್ದಾರೆ. ಮೈತ್ರಿ ಪಕ್ಷಗಳ ನಡುವೆ ಗೊಂದಲಮಯ ವಾತಾವರಣ ಇದೆ ಎಂದಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಳು ಬಿಜೆಪಿಗೆ ಶಕ್ತಿ ತುಂಬಿವೆ ಎಂದಿದ್ದಾರೆ. 

"