ದೆಹಲಿಯ ಸಂಸತ್ ಸೆಂಟ್ರಲ್ ಹಾಲ್ ನಿಜಕ್ಕೂ ಇಂದು [ಶನಿವಾರ] ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಯಾಕಂದ್ರೆ 353 ಸಂಸದರನ್ನೊಳಗೊಂಡ ಎನ್ ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ 'ಫಿರ್ ಏಕ್ ಬಾರ್ ಮೋದಿ ಸರ್ಕಾರ್', ಮೋದಿಯೇ ನಮ್ಮ ನಾಯಕ ಎಂದು ಘೋಷಣೆ ಮೊಳಗಿತು.

ನವದೆಹಲಿ, [ಮೇ.25]:  ಹರ್..ಹರ್ ಮೋದಿ.. ಘರ್..ಘರ್.. ಮೋದಿ ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು 2ನೇ ಬಾರಿಗೆ ಎನ್ ಡಿಎ ಮೈತ್ರಿ ಕೂಟದ ನಾಯಕನಾಗಿ ಆಯ್ಕೆ ಮಾಡಿಲಾಯಿತು.

ಸಂಸತ್​ ಸೆಂಟ್ರಲ್ ಹಾಲ್​ನಲ್ಲಿ ಇಂದು [ಶನಿವಾರ] ಸಂಜೆ ಎನ್​ಡಿಎ ಮೈತ್ರಿಕೂಟದ ಸಭೆ ನಡೆಯಿತು.ಈ ಸಂಸದೀಯ ಮಂಡಳಿ ಸಭೆಯಲ್ಲಿ ಎನ್ ಡಿಎ ಮೈತ್ರಿ ಕೂಟದ ಸಂಸದರೆಲ್ಲಾ ಒಕ್ಕೂರಲಿನಿಂದ ಮೇಜು ಕುಟ್ಟುವ ಮೂಲಕ ಪ್ರಧಾನಿ ಮೋದಿಯನ್ನು ದೇಶದ ನಾಯಕನಾಗಿ ಆಯ್ಕೆ ಮಾಡಿದರು. 

ಅದಕ್ಕೂ ಮುನ್ನ ಸಭೆಯಲ್ಲಿ ನೂತನ ಸಂಸದರು, 39 ಮಿತ್ರಪಕ್ಷಗಳ ಮುಖ್ಯಸ್ಥರು, ಬಿಜೆಪಿಯ ಹಿರಿಯ ನಾಯಕರು ಹಾಗೂ ವಿವಿಧ ರಾಜ್ಯಗಳ ಸಿಎಂಗಳು ಮೋದಿ ಹೆಸರನ್ನು ಅನುಮೋದಿಸಿದರು. ಇದಾದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ನರೇಂದ್ರ ಮೋದಿ ಹೆಸರನ್ನು ಸಂಸದೀಯ ನಾಯಕ ಸ್ಥಾನಕ್ಕೆ ಅನುಮೋದನೆ ಮಾಡಿದರು. 

ಹಾಗೇ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ, ಎಲ್​ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವನ್, ತಮಿಳುನಾಡು ಸಿಎಂ ಪಳನಿ ಸ್ವಾಮಿ ಸೇರಿದಂತೆ ಹಲವು ನಾಯಕರು ಮೋದಿ ಹೆಸರನ್ನು ಅನುಮೋದಿಸಿದರು. 

Scroll to load tweet…

ಈ ಎಲ್ಲಾ ಮುಖಂಡರು ಮೋದಿ ಹೆಸರನ್ನು ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಇನ್ನುಳಿದ ನಾಯಕರೂ ಮೇಜು ತಟ್ಟಿ ಬೆಂಬಲ ಸೂಚಿಸಿದರು. ಬಳಿಕ ಪ್ರಧಾನಿ ಮೋದಿ ಅವರು ಅಡ್ವಾಣಿ, ಮನೋಹರ್ ಜೋಶಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

Scroll to load tweet…