ನವದೆಹಲಿ[ಮೇ.22]: ಲೋಕಸಭಾ ಚುನಾವಣೆಗಳು ಆರಂಭವಾಗುತ್ತಲೇ ದಿಢೀರನೆ ಆರಂಭಗೊಂಡು ಭಾರೀ ವಿವಾದಕ್ಕೆ ಕಾರಣವಾಗಿದ್ದ ‘ನಮೋ ಟೀವಿ’ ಚಾನೆಲ್‌ನ ಪ್ರಸಾರ, ಚುನಾವಣಾ ಪ್ರಚಾರ ಮುಗಿಯುತ್ತಲೇ ದಿಢೀರ್‌ ಬಂದ್‌ ಆಗಿದೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು, ‘ನಮೋ ಟೀವಿ’ ಚಾನೆಲ್‌ ಬಿಜೆಪಿಯ ಚುನಾವಣೆ ಪ್ರಚಾರ ಸಾಧನಗಳಲ್ಲಿ ಒಂದಾಗಿತ್ತು. ಚುನಾವಣೆ ಮುಕ್ತಾಯವಾದ ಬಳಿ ಈ ವಾಹಿನಿ ಮುಂದುವರಿಸುವ ಅಗತ್ಯವಿಲ್ಲ. ಹೀಗಾಗಿ, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಮೇ 17ರಿಂದಲೇ ನಮೋ ಟೀವಿ ಪ್ರಸಾರವಾಗುತ್ತಿಲ್ಲ ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಡಿಟಿಎಚ್‌ನ ಹಿರಿಯ ಸಿಬ್ಬಂದಿಯೊಬ್ಬರು, ‘ನಮೋ ಚಾನೆಲ್‌ ಸಿಗ್ನಲ್‌ ಬಂದ್‌ ಆಗಿರುವುದರಿಂದ, 2-3 ದಿನಗಳಿಂದ ನಮೋ ಟೀವಿ ಪ್ರಸಾರ ನಿಲ್ಲಿಸಿದ್ದೇವೆ,’ ಎಂದು ತಿಳಿಸಿದ್ದಾರೆ.