ಕೊಪ್ಪಳ, (ಮಾ.28): ಕೊಪ್ಪಳ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವೋಟ್ ಫಾರ್ ನೋಟಾ ಅಭಿಯಾನ ಆರಂಭವಾಗಿದೆ.

ವಾಟ್ಸಪ್ ಗಳಲ್ಲಿ ರಾಜಶೇಖರ್ ಹಿಟ್ನಾಳ್ ವಿರುದ್ದ ಮುಸ್ಲಿಂ ಸಮುದಾಯ ವೋಟ್ ಫಾರ್ ನೋಟಾ ಅಭಿಯಾನ ಶುರು ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜಶೇಖರ್ ಹಿಟ್ನಾಳ್ ಸಹೋದರ ಹಾಲಿ ಶಾಸಕರಾಗಿದ್ದಾರೆ. ಇದ್ರಿಂದ ಕುಟುಂಬ ರಾಜಕೀಯಕ್ಕೆ ಬೇಸತ್ತು ಮುಸ್ಲಿಂ ಸಮುದಾಯದ ಆಕ್ರೋಶ ವ್ಯಕ್ತಪಡಿಸಿದ್ದು, ವಾಟ್ಸಪ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದಿನಕ್ಕೊಂದು ಪ್ರಶ್ನೆ ಅಭಿಯಾನ ಶುರು ಮಾಡಿದ್ದಾರೆ.

ಮೊನ್ನೇ ಅಷ್ಟೇ  ರಾಜಶೇಖರ್  ಹಿಟ್ನಾಳ್ ತಾವು ಕಾರ್ಖಾನೆಗಳಲ್ಲಿ ಎಷ್ಟು ಕಾರ್ಖಾನೆಯಲ್ಲಿ‌ ಉದ್ಯೋಗ ಕೊಡಿಸಿದ್ದೀರಿ.? ಮುಸ್ಲಿಂ ವಿದ್ಯಾರ್ಥಿಗಳಿಗೆ ಎಷ್ಟು ಉದ್ದೋಗ ಕೊಡಿಸಿದ್ದೀರಿ? ಕಾಂಗ್ರೆಸ್ ಗುತ್ತಿಗೆದಾರರಿಗೆ ಎಷ್ಟು ಕೆಲಸ ಕೊಡಸಿದ್ದೀರಿ.?

ಉತ್ತರ ಯಾವಾಗ ಹೇಳ್ತೀರಿ ಎಂಬ ಅಭಿಯಾನ ಆರಂಭಿಸಿದದ್ದರು. ಇದೀಗ ನೋಟಾ ಅಭಿಯಾನ ಶುರುಮಾಡಿದ್ದು, ಕಾಂಗ್ರೆಸ್‌ಗೆ ಇರುಸುಮುರುಸು ಉಂಟಾಗಿದೆ.