ಬೀದರ್  : ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಚೇರಿ ಬಳಿ ಹಣ ಹಂಚಿಕೆ ಮಾಡುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ಬಿಜೆಪಿ ಸಂಸದ ಖೂಬಾ ಕಚೇರಿ ಬಳಿಯೇ ಹಣ ಹಂಚುತ್ತಿದ್ದು, ಅವರ ಪಿಎ ಅಮರ್ ಎಂಬಾತ ನೋಟುಗಳನ್ನು ಹಂಚುತ್ತಿದ್ದರು ಎನ್ನಲಾಗಿದೆ. 

ಖೂಬಾ ಮನೆ ಹಾಗೂ ಕಚೇರಿ ಬಳಿ ಹಣ ಹಂಚಿಕೆ ಮಾಡುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಯುವ ಮೋರ್ಚಾ ಫೇಸ್ ಬುಕ್ ಪೇಜ್ ನಲ್ಲಿ ಹಣ ಹಂಚಿಕೆ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ. 

ಹಣದ ಬಲ, ಹೆಂಡದ ಬಲ, ತೋಳ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಬಿಎಸ್ ವೈ ನೀಡಿದ್ದ ಹೇಳಿಕೆಯನ್ನು ಸೇರಿಸಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 

ಜಿದ್ದಾಜಿದ್ದಿನ ಹಣಾ ಹಣಿಯಲ್ಲಿ ಇಷ್ಟು ದಿನ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದ್ದ ಬೀದರ್ ಕ್ಷೇತ್ರ ಇದೀಗ ವಿಡಿಯೋ ವಾರ್ ಗೆ ಸಾಕ್ಷಿಯಾಗಿದೆ.