ಲೋಕಸಭಾ ಚುನಾವಣಾ ಪರ್ವ ನಡೆಯುತ್ತಿದೆ ಈಗಾಗಲೇ 5 ಹಂತದ ಚುನಾವಣೆ ನಡೆದಿದ್ದು, ಇನ್ನೆರಡು ಹಂತಗಳು ನಡೆಯಬೇಕಿವೆ. ಮತದಾರರನ್ನು ಸೆಳೆಯುವ ಭರದಲ್ಲಿ ಪಕ್ಷದ ನಾಯಕರು ಪರಸ್ಪರ ಕೆಸರೆರಚಾಟ ಮುಂದುವರೆಸಿದ್ದಾರೆ. ಸದ್ಯ ಮೋದಿಯನ್ನು ಶಿಶುಗೀತೆ ಬಳಸಿಕೊಂಡು ಪಕ್ಷವೊಂದು ಟೀಕಿಸಿದೆ.
ನವದೆಹಲಿ[ಮೇ.09]: ‘ಜಾನಿ ಜಾನಿ ಎಸ್ ಪಪ್ಪಾ’ ಎಂಬ ಶಿಶುಗೀತೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರ್‌ಜೆಡಿ ವಿಭಿನ್ನವಾಗಿ ಟೀಕಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
‘ಭವಿಷ್ಯದಲ್ಲಿ ಮೋದಿ ಭಕ್ತರ ಮಕ್ಕಳು ಈ ಹಾಡನ್ನು ಕಲಿಯಲಿದ್ದಾರೆ. ‘ಮೋದಿ- ಮೋದಿ ಎಸ್ ಪಪ್ಪಾ, ಎನಿ ಡೆವಲೆಪ್‌ಮೆಂಟ್? ನೋ ಪಪ್ಪಾ? ಫಾರ್ಮರ್ ಹ್ಯಾಪಿ? ನೋ ಪಪ್ಪಾ, ವುಮನ್ ಸೇಫ್? ನೋ ಪಪ್ಪಾ, 10 ಕ್ರೋರ್ ಜಾಬ್ ನೋ ಪಪ್ಪಾ, 15 ಲಕ್ಷ?? ನೋ ಪಪ್ಪಾ, ಓನ್ಲಿ ಜುಮ್ಲಾ? ಹ್ಹ ಹ್ಹ ಹ್ಹ’ (ಮೋದಿ- ಮೋದಿ ಹೌದು ಅಪ್ಪಾ, ಯಾವುದೇ ಅಭಿವೃದ್ಧಿ? ಇಲ್ಲಾ ಅಪ್ಪಾ, ರೈತರು ಖುಷಿಯೇ? ಇಲ್ಲಾ ಅಪ್ಪಾ, ಮಹಿಳೆಯರು ಸುರಕ್ಷಿತವೇ? ಇಲ್ಲಾ ಅಪ್ಪಾ, 10 ಕೋಟಿ ಉದ್ಯೋಗ? ಇಲ್ಲಾ ಅಪ್ಪಾ, 15 ಲಕ್ಷ?? ಇಲ್ಲಾ ಅಪ್ಪಾ, ಬರೀ ಸುಳ್ಳು? ಹ್ಹ ಹ್ಹ ಹ್ಹ) ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
Scroll to load tweet…
ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, ಪರ ವಿರೋಧಗಳು ವ್ಯಕ್ತವಾಗಿವೆ.
