ಬೆಂಗಳೂರು (ಮಾ. 27): ಪಂಡಿತ್ ನೆಹರು 1947 ರಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲರನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ ಎಂದು ಆಗಾಗ ಮೋದಿ ಸಾಹೇಬರು ಹೇಳುತ್ತಿರುತ್ತಾರೆ. ಆದರೆ ಮೋದಿ ತನ್ನ ರಾಜಕೀಯ ಗುರು ಅಡ್ವಾಣಿ ಅವರಿಗೆ ಬಲವಂತದ ನಿವೃತ್ತಿ ಕೊಡಿಸಿದ್ದಾರೆ.  

ಅಮಿತ್ ಶಾ ಟಿಕೆಟ್ ಫೈನಲ್ ಮಾಡ್ತಾರೆ, ಮೋದಿ ಸುಮ್ನೆ ಹೂಂ ಅಂತಾರೆ

ನವೆಂಬರ್ ನಂತರ ಒಮ್ಮೆಯೂ ಅಡ್ವಾಣಿ ಅವರನ್ನು ಮೋದಿ ಮತ್ತು ಅಮಿತ್ ಶಾ ಭೇಟಿ ಆಗಿಲ್ಲವಂತೆ. ಹೋಗಲಿ ಗಾಂಧಿ ನಗರದಿಂದ ಸ್ವತಃ ನಿಲ್ಲುತ್ತಿರುವ ಅಮಿತ್ ಶಾ ಹೆಸರಿನ ಬಗ್ಗೆ ಯಾರೂ ಕೂಡ ಅಡ್ವಾಣಿ ಗಮನಕ್ಕೂ ತಂದಿಲ್ಲ ಅಂತೆ. ಏನೇ ಇರಲಿ ಮೋದಿ ಸಾಹೇಬರು ಗುರುವಿನ ನಿವೃತ್ತಿ ವಿಷಯವನ್ನು ಇನ್ನು ಚೆನ್ನಾಗಿ ನಿರ್ವಹಿಸಬಹುದಿತ್ತು. ಆದರೆ ಎಲ್ಲೋ ಒಂದು ಕಡೆ ಗುರು-ಶಿಷ್ಯರ ನಡುವೆ ಸಂವಹನದ ಕೊರತೆಯಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ