ಶಿವಮೊಗ್ಗ : ನಾಪತ್ತೆಯಾಗಿದ್ದ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ. 

ನಾಮಪತ್ತೆಯಾಗಿದ್ದ ಮೊಹಮ್ಮದ್ ಯೂಸೂಫ್ ಖಾನ್  ಹಾವೇರಿಯಲ್ಲಿ ಪತ್ತೆಯಾಗಿದ್ದಾರೆ.ಇಂದು ಬೆಳಗ್ಗೆ 9 ಗಂಟೆಗೆ ಪತ್ನಿ ಮೊಬೈಲ್ ಗೆ ಕರೆ ಮಾಡಿ ಹಾವೇರಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. 

ಗುರುವಾರದಿಂದ ಅಭ್ಯರ್ಥಿ ನಾಪತ್ತೆಯಾಗಿದ್ದು, ಈ ಸಂಬಂಧ ಕುಟುಂಬಸ್ಥರು ಶಿವಮೊಗ್ಗದ ತುಂಗಾನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. 

ಕಳೆದ ರಾತ್ರಿ ಶಿವಮೊಗ್ಗ ಎಸ್ ಪಿ ಡಾ. ಅಶ್ವಿನಿ, ಎಎಸ್ ಪಿ ಶೇಖರ್ ಟೆಕಣ್ಣನವರ್ ನೇತೃತ್ವದಲ್ಲಿ ಕುಟುಂಬದ ವಿಚಾರಣೆ ನಡೆಸಲಾಗಿತ್ತು. ಎಪ್ರಿಲ್ 17 ರ ರಾತ್ರಿ 2 ಗಂಟೆಗೆ ಮನೆಯಲ್ಲಿ ಮೊಬೈಲ್ ಬಿಟ್ಟು ಕಾರಿನಲ್ಲಿ ತೆರಳಿದ್ದ ಯುಸೂಫ್ ಬಳಿಕ ಮನೆಗೆ ಮರಳಿರಲಿಲ್ಲ.  ಇದೀಗ ಹಾವೇರಿಯಲ್ಲಿ ಅಭ್ಯರ್ಥಿಯ ಪತ್ತೆಯಾಗಿದೆ.