ಪಾಟ್ನಾ(ಮೇ. 17) ಆರ್‌ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ತಂದೆಯನ್ನು ಉದ್ದೇಶಿಸಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಬಿಹಾರದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಲು ಅವಕಾಶ ಸಿಗದಿದ್ದಕ್ಕೆ ತಮ್ಮ ಮನದಾಳವನ್ನು ಟ್ವೀಟ್ ಮೂಲಕ ಹೊರಹಾಕಿದ್ದಾರೆ.

ಮಿಸ್ ಯು ಪಪ್ಪಾ ... ಎಂಧು ತೇಜ್ ಪ್ರತಾಪ್ ಬರೆದಿದ್ದಾರೆ. ಭ್ರಷ್ಟಾಚಾರದ ಆರೋಪದಡಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದಾರೆ. ಲಾಲೂ ಇಲ್ಲದ ಕಾರಣಕ್ಕೆ ಮಹಾಘಟಬಂಧನ್ ದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂಬ ಅರ್ಥದಲ್ಲಿ ನೋವು ಹೊರಹಾಕಿದ್ದಾರೆ.

ಸಾಧ್ವಿ ಅವರನ್ನು ಎಂದಿಗೂ ಕ್ಷಮಿಸಲ್ಲ: ಪ್ರಧಾನಿ ಮೋದಿ!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನಗೆ ಮಾತನಾಡಲು ಹೇಳಿದ್ದರು. ಆದರೆ ಅಂತಿಮವಾಗಿ ನನಗೆ ಅವಕಾಶವೇ ಸಿಗಲಿಲ್ಲ ಎಂದು ತೇಜ್ ಪ್ರತಾಪ್ ನೋವು ತೋಡಿಕೊಂಡಿದ್ದಾರೆ.

ದೋಸ್ತಿ ಪಕ್ಷಗಳನ್ನು ಕಾಂಗ್ರೆಸ್ ಬಿಹಾರದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದೇ ಕಾಣಕ್ಕೆ ತನ್ನ ಬಲ ಕಳೆದುಕೊಳ್ಳುತ್ತದೆ. ಸರಿಯಾದ ಸೈನಿಕರಿಗೆ ಹೋರಾಟ ಮಾಡಲು ಅವಕಾಶ ನೀಡದೆ ಇದ್ದರೆ ನಾವು ಯುದ್ಧ ಗೆಲ್ಲುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.