ಬೀದರ್[ಏ. 19]  ಈಶ್ವರ್ ಖಂಡ್ರೆಗೆ ನನ್ನ ಕ್ಷೇತ್ರದಿಂದ ಬಹುಮತ ಕೊಡದಿದ್ರೆ ರಾಜೀನಾಮೆ ನೀಡುವೆ ಎಂದು  ಬೀದರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ರಹೀಂ ಖಾನ್ ಹೇಳಿಕೆ ನೀಡಿದ್ದಾರೆ.

ಬೀದರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಬೀದರ್ ಉತ್ತರ ಕ್ಷೇತ್ರದಿಂದ 20 ಸಾವಿರಕ್ಕೂ ಹೆಚ್ಚು ಲೀಡ್ ಬರಲಿದೆ. ಈಶ್ವರ್ ಖಂಡ್ರೆ ಅವರಿಗೆ ನನ್ನ ಕ್ಷೇತ್ರದಿಂದ ಲೀಡ್ ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಬೀದರ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಹೀಂ ಖಾನ್ ರೊಚ್ಚಿಗೆದ್ದು ಈ ಹೇಳಿಕೆ ನೀಡಿದ್ದು ಸಹಜವಾಗಿ ರಾಜಕಾರಣದ  ಬಿಸಿ ಹೆಚ್ಚಿಸಿದೆ. ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಇದ್ದರೆ  ಬಿಜೆಪಿಯಿಂದ ಭಗವಂತ ಖೂಬಾ ಸೆಣೆಸಾಟ ನಡೆಸುತ್ತಿದ್ದಾರೆ.  ಪಕ್ಕದ ಕಲಬುರಗಿಯಲ್ಲಿ ಆದ ಪಕ್ಷಾಂತರ ಪರ್ವ ಈ ಕ್ಷೇತ್ರದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

"

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.