ಫೋಟೋ ಕೃಪೆ: ಟೈಮ್ಸ್ ಆಫ್ ಇಂಡಿಯಾ

ಗೋರಖ್‌ಪುರ್(ಮೇ.16): ಉತ್ತರಪ್ರದೇಶ ಸಿಎಂ ಸ್ವಕ್ಷೇತ್ರ ಗೋರಖ್‌ಪುರ್ ದಲ್ಲಿ ಗೋರಖ್ ನಾಥ್ ಚಿಕಿತ್ಸಾಲಯ ಟ್ರಸ್ಟ್ ವತಿಯಿಂದ ನೂತನ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ. ಯೋಗಿ ಆದಿತ್ಯನಾಥ್ ಗೋರಖ್‌ನಾಥ್ ಮಠದ ಪ್ರಧಾನ ಅರ್ಚಕರು.

ಗೋರಖ್‌ನಾಥ್ ಚಿಕಿತ್ಸಾಲಯ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ನಿರ್ಮಾಣದ ಉಸ್ತುವಾರಿಯನ್ನು ಜಾಕಿರ್ ವಾರ್ಸಿ ಎಂಬ ಮುಸ್ಲಿಂ ವ್ಯಕ್ತಿ ನೋಡಿಕೊಳ್ಳುತ್ತಿದ್ದು, ಗೋರಖ್‌ನಾಥ್ ಮಠದ ಮತ್ತು ಯೋಗಿ ಆದಿತ್ಯನಾಥ್ ಅವರ ಅಭಿಮಾನಿಯಾಗಿದ್ದಾರೆ.

2004ರಿಂದಲೂ ಯೋಗಿ ಅವರ ಆಪ್ತ ಬಳಗದಲ್ಲಿ ಗುರಿತಿಸಿಕೊಂಡಿರುವ ಜಾಕಿರ್, ಮೊಹ್ಮದ್ ಯಾಸೀನ್ ಅವರೊಂದಿಗೆ ಆಸ್ಪತ್ರೆಯ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಮುಖ್ಯಮಂತ್ರಿ ಆದ ಬಳಿಕ ರಾಜ್ಯದ ಸರ್ವೋತೋಮುಖ ಬೆಳವಣಿಗೆಗೆ ಅವರ ಕೊಡುಗೆ, ಈ ಬಾರಿಯೂ 2104ರ ಫಲಿತಾಂಶ ಪುನರಾವತರ್ನೆಗೆ ಸಹಕಾರಿ ಎನ್ನುತ್ತಾರೆ ಜಾಕಿರ್.

ನಾನು ಗೋರಖ್‌ನಾಥ್ ಮಠಕ್ಕೆ ಯಾವ ಸಂದರ್ಭದಲ್ಲಾದರೂ ಭೇಟಿ ನೀಡುತ್ತೇನೆ. ಮಠದ ಪ್ರಧಾನ ಅರ್ಚಕ ಯೋಗಿ ಆದಿತ್ಯನಾಥ್ ಅವರ ಕೋಣೆಯೊಳಗೆ ಯಾವುದೇ ಪೂರ್ವಾನುಮತಿ ಇಲ್ಲದೇ ಪ್ರವೇಶಿಸುತ್ತೇನೆ. ಮಠದಲ್ಲಿ ನನ್ನನ್ನು ಯಾರೂ ತಡೆಯುವುದಿಲ್ಲ ಅಂತಾರೆ ಜಾಕಿರ್.

ಪ್ರಧಾನಿ ಮೋದಿ ಮತ್ತು ಯೋಗಿ ಆಧಿತ್ಯನಾಥ್ ಮುಸ್ಲಿಂ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ನಿಷೇಧ ಮಸೂದೆ ಇದಕ್ಕೊಂದು ಉತ್ತಮ ಉದಾಹರಣೆ ಎಂದು ಜಾಕಿರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಮತ್ತು ದೇಶದ ಒಳಿತಿಗಾಗಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಜಾಕಿರ್, ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅವರ ಜಾತ್ಯಾತೀತತೆ ಗ್ರಹಿಸಲು ಸಾಧ್ಯ ಎನ್ನುತ್ತಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ