ಬಿಜೆಪಿಯನ್ನು ಮುಳುಗುತ್ತಿರುವ ಹಡಗಿಗೆ ಹೋಲಿಸಿದ ಮಾಯಾವತಿ| ಆರ್‌ಎಸ್‌ಎಸ್ ಕೂಡ ಬಿಜೆಪಿ ಕೈಬಿಟ್ಟಿದೆ ಎಂದ ಬಿಎಸ್‌ಪಿ ಮುಖ್ಯಸ್ಥೆ| ‘ಬಿಜೆಪಿ 2014ರಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ’| ‘ಸಾರ್ವಜನಿಕರಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಪಕ್ಷದಿಂದ ದೂರ ಸರಿದ ಆರ್‌ಎಸ್‌ಎಸ್’|
ಲಕ್ನೋ(ಮೇ.14): ಬಿಜೆಪಿ ಪರಿಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದ್ದು, ಆರ್‌ಎಸ್‌ಎಸ್ ಕೂಡ ಆ ಪಕ್ಷದ ಕೈ ಬಿಟ್ಟಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
2014ರಲ್ಲಿ ಬಿಜೆಪಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಆರ್‌ಎಸ್‌ಎಸ್ ಕೂಡ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.
Scroll to load tweet…
ಸಾರ್ವಜನಿಕರಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಆರ್‌ಎಸ್‌ಎಸ್ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂದು ಮಾಯಾವತಿ ಕುಹುಕವಾಡಿದ್ದಾರೆ. ಬಿಜೆಪಿ ಪರವಾಗಿ ಯಾವ ಆರ್‌ಎಸ್‌ಎಸ್ ನಾಯಕರೂ ಪ್ರಚಾರ ನಡೆಸದಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.
