ಬದ್ಧ ವೈರಿಗಳನ್ನು ಒಂದು ಮಾಡಿದ ರಾಜಕೀಯ ಸನ್ನಿವೇಶ| ಮುಲಾಯಂ ಸಿಂಗ್ ಯಾದವ್ ಅವರನ್ನು ಕೊಂಡಾಡಿದ ಮಾಯಾವತಿ| ಪ್ರಧಾನಿ ಮೋದಿ ನಕಲಿ ಹಿಂದುಳಿದ ವರ್ಗಗಳ ನಾಯಕ ಎಂದ ಮಾಯಾವತಿ| 'ಮುಲಾಯಂ ಹಿಂದುಳಿದ ವರ್ಗಗಳ ಪರ ನೈಜ ಕಾಳಜಿ ಹೊಂದಿದ್ದಾರೆ'| ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ಒಂದಾಗಿರುವುದಾಗಿ ಮಾಯಾವತಿ ಸ್ಪಷ್ಟನೆ|
ಲಕ್ನೋ(ಏ.19): ರಾಜಕಾರಣವೇ ಹಾಗೆ. ಕ್ಷಣಾರ್ಧದಲ್ಲಿ ಶತ್ರುಗಳನ್ನು ಮಿತ್ರರನ್ನಾಗಿಯೂ, ಮಿತ್ರರನ್ನು ಶತ್ರುಗಳನ್ನಾಗಿಯೂ ಪರಿವರ್ತಿಸುವ ಶಕ್ತಿ ಅದಕ್ಕಿದೆ.
ಉತ್ತರಪ್ರದೇಶದ ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಪರಿಗಣಿಸಲ್ಪಟ್ಟಿದ ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ ಪಿ ನಾಯಕಿ ಮಾಯಾವತಿ, ಇದೀಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ.
ಪ್ರಧಾನಿ ಮೋದಿ ನಕಲಿ ಹಿಂದುಳಿದ ನಾಯಕರಾಗಿದ್ದು, ಮುಲಾಯಂ ಸಿಂಗ್ ಹಿಂದುಳಿದ ವರ್ಗದ ಪರ ಕಾಳಜಿ ಹೊಂದಿರುವ ನಿಜವಾದ ನಾಯಕ ಎಂದು ಮಾಯಾವತಿ ಹೇಳಿದ್ದಾರೆ.
ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಒಬ್ಬ ಧೀಮಂತ ನಾಯಕರಾಗಿದ್ದು, ದೇಶ ಮತ್ತು ಸಂವಿಧಾನ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ನಾವು ಒಂದಾಗಿರುವುದಾಗಿ ಮಾಯಾವತಿ ಹೇಳಿದ್ದಾರೆ.
ಅದೆನೆ ಇರಲಿ 24 ವರ್ಷಗಳ ಹಗೆತನ ಬದಿಗಿರಿಸಿ ಇಂದು ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಈ ಚುನಾವಣೆ ತಂದಿತ್ತ ಸನ್ನಿವೇಶದ ವಿಶೇಷತೆ ಎನ್ನಬಹುದು.
