ನವದೆಹಲಿ[ಮೇ.18]: ‘ಪ್ರಧಾನಿ ಮೋದಿ ಬಳಿಗೆ ತಮ್ಮ ಪತಿ ಏನಾದರೂ ಹೋದರೆ ಬಿಜೆಪಿಯ ಮಹಿಳಾ ನಾಯಕರು ಹೆದರುತ್ತಾರೆ. ಎಲ್ಲಿ ಮೋದಿ ರೀತಿ ತಮ್ಮ ಗಂಡ ಕೂಡ ತಮ್ಮನ್ನು ತ್ಯಜಿಸಿಬಿಡುತ್ತಾರೋ ಎಂದು ಅಂಜುತ್ತಾರೆ’ ಎಂಬ ಹೇಳಿಕೆ ನೀಡಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಕೇಂದ್ರ ಮಂತ್ರಿ ರಾಮದಾಸ್‌ ಅಠಾವಳೆ ತಿರುಗೇಟು ಕೊಟ್ಟಿದ್ದಾರೆ.

ಮಾಯಾವತಿಗೆ ಮದುವೆ ಆಗಿಲ್ಲ. ಆಗಿದ್ದಿದ್ದರೆ ಗಂಡನನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಾಗುತ್ತಿತ್ತು. ವಿವಾಹವಾಗದ ಕಾರಣ ಮಾಯಾವತಿಗೆ ಕುಟುಂಬದ ಬಗ್ಗೆ ಗೊತ್ತಿಲ್ಲ. ಮಾಯಾವತಿ ಅವರ ಬಗ್ಗೆ ಗೌರವವಿದೆ. ಅವರು ಈ ರೀತಿಯ ಹೇಳಿಕೆ ನೀಡಬಾರದು ಎಂದು ಎನ್‌ಡಿಎ ಮಿತ್ರಪಕ್ಷ ಆರ್‌ಪಿಐ ಮುಖ್ಯಸ್ಥರಾಗಿರುವ ಅಠಾವಳೆ ಸಲಹೆ ಮಾಡಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ನಾಯಕರ ಪರಸ್ಪರ ವಾಕ್ಸಮರ ತಾರಕಕ್ಕೇರಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.