ಅಮೇಥಿ, ರಾಯ್‌ಬರೇಲಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕಣಕ್ಕಿಲ್ಲ| ಅಭ್ಯರ್ಥಿ ಕಣಕ್ಕಿಳಿಸದಿರಲು ಕಾರಣವೇನೆಂದು ಹೇಳಿದ ಮಾಯಾವತಿ| ಬಿಜೆಪಿ ವಿರುದ್ಧ ಮಾಯಾ ರಣತಂತ್ರ!

ಲಕ್ನೋ[ಮೇ.05]: ಬಹುಜನ್ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರದಿಂದ ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಯಾಕೆ ಕಣಕ್ಕಿಳಿಸಿಲ್ಲ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 

ಸುದ್ದಿ ಸಂಸ್ಥೆ ANI ಜೊತೆಗಿನ ಮಾತುಕತೆ ವೇಳೆ ಪ್ರತಿಕ್ರಿಯಿಸಿದ ಮಾಯಾ 'ನಾವು ದೇಶದಲ್ಲಿ, ಜನಹಿತಕ್ಕಾಗಿ ಅದರಲ್ಲೂ ವಿಶೇಷವಾಗಿ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಕ್ತಿಯನ್ನು ಕುಂದಿಸಲು ಅಮೇಥಿ ಹಾಗೂ ರಾಯ್‌ಬರೇಲಿಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಈ ಮೂಲಕ ಕೈ ಪಾಳಯದ ಇಬ್ಬರೂ ಸರ್ವೋಚ್ಛ ನಾಯಕರು ಮತ್ತೆದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕೆಂಬುದು ನಮ್ಮ ಉದ್ದೇಶ ಎಂದಿದ್ದಾರೆ.

Scroll to load tweet…

ಇಷ್ಟೇ ಅಲ್ಲದೇ 'ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಈ ಇಬ್ಬರೂ ನಾಯಕರು ಕ್ಷೇತ್ರದ ಗೆಲುವಿಗಾಗಿ ಆ ಎರಡು ಕ್ಷೇತ್ರಗಳಲ್ಲೇ ಕಳೆದು ಹೋಗುವ ಸಾಧ್ಯತೆ ಇತ್ತು. ಹೀಗಾದಲ್ಲಿ ಬಿಜೆಪಿ ರಾಜ್ಯದ ಹೊರಗಿನ ಕ್ಷೇತ್ರಗಳಲ್ಲಿ ಇವರ ಗೈರು ಹಾಜರಾತಿಯ ಲಾಭ ಪಡೆಯುವ ಸಾಧ್ಯತೆ ಇತ್ತು. ಈ ನಿಟ್ಟಿನಲ್ಲಿ ನಾವು ಮುಂದಾಲೋಚಿಸಿ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಈ ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಪಕ್ಷದ ಪ್ರತಿಯೊಂದು ಮತ ಕಾಂಗ್ರೆಸ್ ಪಕ್ಷದ ಈ ಇಬ್ಬರು ನಾಯಕರಿಗೆ ಸಿಗುತ್ತವೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ SP, BSP ಹಾಗೂ ಪಕ್ಷೇತರರು ಮೈತ್ರಿ ಮಾಡಿಕೊಂಡಿವೆ. ಆದರೆ ಈ ಮೈತ್ರಿ ಪಾಳಯ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಠಿ ಹಾಗೂ ಸೋನಿಯಾ ಗಾಂಧಿ ಕಣಕ್ಕಿಳಿಯುತ್ತಿರುವ ರಾಯ್ಬರೇಲಿ ಕ್ಷೇತ್ರದಿಂದ ತಮ್ಮ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.BSP 38, SP 37 ಹಾಗೂ ಮೂರು ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ.