ಒಮ್ಮೆಯೂ ಲೋಕಸಭೆ ಚುನಾವಣೆ ಗೆದ್ದಿಲ್ಲ ಮನಮೋಹನ್

10 ವರ್ಷ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ಒಮ್ಮೆಯೂ ಲೋಕಸಭೆ ಚುನಾವಣೆ ಗೆದ್ದವರಲ್ಲ. ಜೀವನದಲ್ಲಿ ಮೊದಲ ಬಾರಿಗೆ 1999ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ವಿ.ಕೆ. ಮಲ್ಹೋತ್ರಾ ಎದುರು ೩೦ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

 ಕಾಂಗ್ರೆಸ್ ಬಿಟ್ಟು, ಬೇರೆ ಪಕ್ಷದಿಂದ ಮಂತ್ರಿಯಾಗಿದ್ದ ಚಿದು

ಪಿ. ಚಿದಂಬರಂ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕ. 1996ರಲ್ಲಿ ಅವರು ಕಾಂಗ್ರೆಸ್ ತೊರೆದು ತಮಿಳು ಮಾನಿಲಾ ಕಾಂಗ್ರೆಸ್ ಸೇರಿದ್ದರು. ತಮಿಳುನಾಡಿನ ಶಿವಗಂಗಾ ಕ್ಷೇತ್ರದಲ್ಲಿ ಗೆದ್ದಿದ್ದರು. ಎಚ್.ಡಿ. ದೇವೇಗೌಡ ಮಂತ್ರಿ ಮಂಡಲದಲ್ಲಿ ಹಣಕಾಸು ಸಚಿವರಾಗಿದ್ದರು. ೨೦೦೪ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ದರು.

56100 ಮತಗಳ ಅಂತರ

1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಸುಷ್ಮಾ ಸ್ವರಾಜ್ ಅವರನ್ನು 56100 ಮತಗಳ ಅಂತರದಿಂದ ಮಣಿಸಿದ್ದರು.