ಮಂಡ್ಯ (ಏ. 18): ಮತಹಾಕಿ ಬಂದ ಮತದಾರನೊಬ್ಬ ಮನೆಯಲ್ಲಿ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  

ಮಂಡ್ಯದ ಮಲ್ಲನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.  ಬೊಮ್ಮೆಗೌಡ (30) ಮೃತ ದುರ್ದೈವಿ. ಬೊಮ್ಮೇಗೌಡ ನಿವಾಸಕ್ಕೆ ಮೈತ್ರಿ ಅಭ್ಯರ್ಥಿ ನಿಖಿಲ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. 

ಇನ್ನು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಇಂದು (ಗುರುವಾರ) ನಿಖಿಲ್ ಕುಮಾರಸ್ವಾಮಿ ವಾಹನ ಏರಿ ರೋಡ್ ಶೋ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಮಲತಾ ಅಂಬರೀಶ್  ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಆದ್ರೆ ಸುಮಲತಾ ಪ್ರಚಾರಕ್ಕೆ ಪೊಲೀಸರು ನಿರಾಕರಿಸಿದ್ದಾರೆ.

ಇದ್ರಿಂದ ಕೆರಳಿದ ಸುಮಲತಾ ಬೆಂಬಲಿಗರು ಪೊಲೀಸರ ವರ್ತನೆಗೆ ಆಕ್ರೋಶಗೊಂಡು ಸುಮಲತಾ ಪರ ಘೋಷಣೆ ಕೂಗಿದ್ರು. ಈ ವೇಳೆ ನಿಖಿಲ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ತಕ್ಷಣವೇ ಪೋಲಿಸರು ಮಧ್ಯೆ ಪ್ರವೇಶಿಸಿ ಎರಡು ಕಡೆ ಬೆಂಬಲಿಗರನ್ನು ನಿಯಂತ್ರಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದರು.