ಮಂಡ್ಯ, [ಮಾ.13]: ಇಂದು [ಬುಧವಾರ] ಜೆಡಿಎಸ್ ನ ಒಂದು ಲೋಕಸಭಾ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗಿದೆ. ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಪ್ರಜ್ವಲ್ ರೇವಣ್ಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಘೋಷಣೆ ಮಾಡಿದರು. 

ಇದರ ಬೆನ್ನಲ್ಲೇ ನಾಳೆ  ಅಂದ್ರೆ ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಮಂಡ್ಯ: ನಿಖಿಲ್ ರಾಜಕೀಯ ಭವಿಷ್ಯ ಬಿಚ್ಚಿಟ್ಟ ಗುಪ್ತಚರ ಇಲಾಖೆ ವರದಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾಳೆ ಹನ್ನೊಂದು ಗಂಟೆಗೆ ದೇವೇಗೌಡರು ಅಧಿಕೃತವಾಗಿ ನಿಖಿಲ್ ಅಭ್ಯರ್ಥಿ ಎಂದು  ಘೋಷಣೆ ಮಾಡ್ತಾರೆ ಎಂದು ಹೇಳಿದರು.‌

ಮದ್ದೂರಿನಿಂದ ಬೈಕ್ ರ್ಯಾಲಿ ಮೂಲಕ ಮಂಡ್ಯಕ್ಕೆ ಅದ್ದೂರಿ ಸ್ವಾಗತದಲ್ಲಿ ಕರೆ ತರಲಾಗುತ್ತೆ. ಬಳಿಕ ಸಮಾವೇಶದಲ್ಲಿ ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿದ್ದಾರೆ ಎಂದರು.

ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಹಾಗು ಜೆಡಿಎಸ್ ಮೆತ್ರಿ ಅಭ್ಯರ್ಥಿ ಎಂದು ಈಗಾಗಲೇ ಗೊತ್ತಾಗಿದೆ. ಅದನ್ನು ದೇವೇಗೌಡ ಅವರು ಅಧಿಕೃತಗೊಲಿಸಲಿದ್ದಾರೆ ಅಷ್ಟೇ.

ನಿಖಿಲ್ ವಿರುದ್ಧ ಪ್ರಬಲ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಕಣದಲ್ಲಿದ್ದು, ಇವರಿಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಗೆ ಮಂಡ್ಯ ಸಾಕ್ಷಿಯಾಗಲಿದೆ.