ಮಂಡ್ಯ : ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಅವರಿಗೆ ರೆಬೆಲ್ ನಾಯಕರು ಬೆಂಬಲ ನೀಡುತ್ತಿರುವುದು ಬಹಿರಂಗವಾದ ಹಿನ್ನೆಲೆ ಜೆಡಿಎಸ್ ನಾಯಕರು ಗರಂ ಆಗಿದ್ದಾರೆ. 

ಕಾಂಗ್ರೆಸ್ ಹೈ ಕಮಾಂಡ್ ಮೂಲಕ ಮೂಲಕವೇ ಸೇಡು ತೀರಿಸಿಕೊಳ್ಳುವ ಯತ್ನ ನಡೆದಿದೆ. ಈ ರೀತಿ ಕ್ರಮ ಕೈಗೊಂಡಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಮುನ್ನುಡಿ ಬರೆದಂತಾಗಲಿದೆ. 

ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿ ದಾಖಲೆಯ ಮತದಾನ?

ಸಕ್ಕರೆ ನಾಡಿನಲ್ಲಿ ಕಾಂಗ್ರೆಸ್ ಸದ್ಯದ ರೆಬೆಲ್ ನಾಯಕರೇ ಅನಿವಾರ್ಯವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಮುಂದಾದಲ್ಲಿ ಮಂಡ್ಯದಲ್ಲಿ ಕೈ ನಾಯಕರೇ ಇಲ್ಲದಂತಾಗಲಿದ್ದು, ಪರ್ಯಾಯ ನಾಯಕರನ್ನು ಹುಟ್ಟುಹಾಕುವುದು ಕಷ್ಟವಾಗಲಿದೆ. 

ಒಂದು ವೇಳೆ ಜೆಡಿಎಸ್ ಒತ್ತಡಕ್ಕೆ ಮಣಿದು ರೆಬೆಲ್ ನಾಯಕರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಲ್ಲಿ ಪಕ್ಷಕ್ಕೆ ನಷ್ಟ ಖಚಿತವಾಗಿದೆ. 

ಇದಲ್ಲೇ ಕೈ ದುರ್ಲವಾದಲ್ಲಿ ಜೆಡಿಎಸ್ ಜಿಲ್ಲೆಯಲ್ಲಿ ಇನ್ನಷ್ಟು ಪ್ರಭಲವಾಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ವಹಿಸಿ ಹೆಜ್ಜೆ ಇಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.