ಮಂಡ್ಯ ಅಖಾಡ ರಂಗೇರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಸ್ವತಃ ಅಖಾಡಕ್ಕೆ ಇಳಿದಿದ್ದು ಸುಮಲತಾಗೆ ಬೆಂಬಲ ಕೋರಿದ್ದವರನ್ನೇ ಸೆಳೆಯಲು ಆರಂಭಿಸಿಸಿದ್ದಾರೆ.
ಮಂಡ್ಯ[ಮಾ. 24] ಸುಮಲತಾ ಬೆಂಬಲ ಕೋರಿದ್ದವರನ್ನೇ ಸೆಳೆಯುತ್ತಿರುವ ಸಿಎಂ ಕುಮಾರಸ್ವಾಮಿ ತಮ್ಮ ಕಡೆ ಸೆಳೆಯುತ್ತಿದ್ದಾರೆ. ಬಿಜೆಪಿ ಮುಖಂಡ ಬಿ. ಶಿವಲಿಂಗಯ್ಯ ಜೆಡಿಎಸ್ ಸೇರ್ಪಡೆ ಸಾಧ್ಯತೆ ಹೆಚ್ಚಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶಿವಲಿಂಗಯ್ಯ ಭೇಟಿ ಬಳಿಕ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಬಗ್ಗೆ ಎಚ್ ಡಿಕೆ ಚಿಂತನೆ ನಡೆಸಿದ್ದಾರೆ ಕಳೆದೊಂದು ವಾರದಹಿಂದೆ ಸುಮಲತಾ ಶಿವಲಿಂಗಯ್ಯ ನಿವಾಸಕ್ಕೆ ಭೇಟಿ ನೀಡಿ ಬೆಂಬಲಕೋರಿದ್ದರು. ಈ ವೇಳೆ ಸುಮಲತಾಗೆ ಬೆಂಬಲ ನೀಡುವ ಭರವಸೆಯನ್ನು ಶಿವಲಿಂಗಯ್ಯ ನೀಡಿದ್ದರು.
ಮನೆ ಮೇಲೆ ಕಲ್ಲು ಹೊಡೆಯುವ ಆಟ ನಡೆಯದು!
ಇದೀಗ ಸಿಎಂ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಲು ಶಿವಲಿಂಗಯ್ಯ ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು ತಂತ್ರ-ಪ್ರತಿತಂತ್ರಗಳು ಜೋರಾಗಿಯೇ ನಡೆದಿವೆ.
