ನವದೆಹಲಿ[ಮೇ. 18] ಹಿಮಾಚಲ ಪ್ರದೇಶದ ಈ ಹಿರಿಯ ಜೀವದ ಹೆಸರು ಶ್ಯಾಮ್ ಸರನ್ ನೇಗಿ, 1951 ರ ಜನರಲ್ ಎಲೆಕ್ಷನ್ ನಿಂದ ವೋಟ್ ಮಾಡುತ್ತಲೇ ಬಂದಿದ್ದಾರೆ.

102 ವರ್ಷದ ಹಿರಿಯರು ಈ ಸಾರಿ ಅಂದರೆ 2019ರ ಚುನಾವಣೆಯಲ್ಲಿಯೂ ಮತದಾನ ಮಾಡಲು ಸಿದ್ಧರಾಗಿದ್ದಾರೆ.ಅವರನ್ನು ಈ ಬಾರಿ ಸಕಲ ಗೌರವಗಳೊಂದಿಗೆ ಅವರನ್ನು ಪೋಲಿಂಗ್ ಬೂತ್ ಗೆ ಕರೆದುಕೊಂಡು ಬರುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

6 ನೇ ಹಂತದ ಲೋಕಸಭಾ ಚುನಾವಣೆಯಲ್ಲಿ 111 ವರ್ಷದ ಬಚ್ಚನ್ ಸಿಂಗ್ ದೆಹಲಿಯಲ್ಲಿ ವೋಟ್ ಮಾಡಿದ್ದರು. ಇದೀಗ 7ನೇ ಮತ್ತು ಕೊನೆ ಹಂತದ ಚುನಾವಣೆ ಮೇ. 19 ರಂದು ನಡೆಯಲಿದ್ದು 102 ವರ್ಷದ ಶ್ಯಾಮ್ ನೇಗಿ ಮತದಾನ ಮಾಡಲಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.